HomeIndiaಗಾಂಜಾ ಸೇವಿಸಿ ವಾಹನ ಚಾಲನೆ; ಪೊಲೀಸರಿಂದ ಹೀಗೊಂದು ಸಲಹೆ

ಗಾಂಜಾ ಸೇವಿಸಿ ವಾಹನ ಚಾಲನೆ; ಪೊಲೀಸರಿಂದ ಹೀಗೊಂದು ಸಲಹೆ

ದೆಹಲಿ ಪೊಲೀಸರು ಉತ್ತಮ ಸಲಹೆಗಳನ್ನು ಚಮತ್ಕಾರದ ರೀತಿಯಲ್ಲಿ ನೀಡಲು ಹಾಗೂ ಜಾಗೃತಿ ಮೂಡಿಸಲು ಸಾಮಾಜಿಕ ಮಾಧ್ಯಮದ ಮೊರೆ ಹೋಗುತ್ತಿದ್ದಾರೆ. ಈ ಬಾರಿ ಅವರು ಗಾಂಜಾ ಸೇವಿಸಿದರೆ ವಾಹನ ಚಾಲನೆ ಮಾಡದಂತೆ ವಿಶಿಷ್ಟ ರೀತಿಯಲ್ಲಿ ಸೂಚನೆ ನೀಡಿದ್ದಾರೆ.

ಫುಡ್ ಡೆಲಿವರಿ ದೈತ್ಯ ಜೊಮ್ಯಾಟೊ ಟ್ವೀಟ್‌ನಲ್ಲಿ ಹಂಚಿಕೊಂಡ ವಿಡಿಯೋದ ಬಳಿಕ ಪೊಲೀಸರು ಈ ವಿಡಿಯೋ ಶೇರ್​ ಮಾಡಿದ್ದಾರೆ. ಶುಭಂ ಎಂಬ ವ್ಯಕ್ತಿ ಪದೇ ಪದೇ ಗಾಂಜಾ ಸರಬರಾಜು ಮಾಡುವಂತೆ ಜೊಮ್ಯಾಟೊಗೆ ಕೇಳುತ್ತಿರುವುದನ್ನು ಕಂಪೆನಿ ಟ್ವಿಟರ್​ನಲ್ಲಿ ಶೇರ್​ ಮಾಡಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದನ್ನು ಉಲ್ಲೇಖಿಸಿರುವ ಪೊಲೀಸರು ಗಾಂಜಾ ಸೇವಿಸಿದರೆ ವಾಹನ ಚಾಲನೆ ಮಾಡದಂತೆ ವಿಶಿಷ್ಟ ರೀತಿಯಲ್ಲಿ ಸೂಚನೆ ನೀಡಿದ್ದಾರೆ. ‘ಯಾರಾದರೂ ಶುಭಂ ಅವರನ್ನು ಭೇಟಿಯಾದರೆ, ಅವರು ಗಾಂಜಾ ಸೇವಿಸಿ ವಾಹನ ಚಲಾಯಿಸಬೇಡಿ ಎಂದು ಹೇಳಿ’ ಎಂದು ಪೊಲೀಸರು ಹೇಳಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular