HomeKarnatakaBIG NEWS: ಬಿಜೆಪಿ ಮುಖಂಡರಿಗೆ ಮಾನ‌ - ಮರ್ಯಾದೆ ಏನೂ ಇಲ್ಲ; ಎಣ್ಣೆ ಅಂಗಡಿ ಮಾಲೀಕರ...

BIG NEWS: ಬಿಜೆಪಿ ಮುಖಂಡರಿಗೆ ಮಾನ‌ – ಮರ್ಯಾದೆ ಏನೂ ಇಲ್ಲ; ಎಣ್ಣೆ ಅಂಗಡಿ ಮಾಲೀಕರ ಪಾದದಡಿ ಇದೆ; ಹೆಚ್.ಡಿ. ರೇವಣ್ಣ ವಾಗ್ದಾಳಿ

ಕೆಡಿಪಿ ಸಭೆಯಲ್ಲೇ ಎಚ್‌ಡಿ ರೇವಣ್ಣ - ಪ್ರೀತಂ ಗೌಡ ನಡುವೆ ಜಟಾಪಟಿ- Kannada Prabha

ಹಾಸನ: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಅಡಿಗಲ್ಲು ಹಾಕಿದ್ದ ವಿಮಾನ ನಿಲ್ದಾಣಕ್ಕೆ ಬಿಜೆಪಿ ನಾಯಕರು ಮತ್ತೆ ಅಡಿಗಲ್ಲು ಹಾಕಲು ಹೊರಟಿದ್ದಾರೆ ಎಂದು ಮಾಜಿ ಸಚಿವ, ಜೆಡಿಎಸ್ ಶಾಸಕ ಹೆಚ್.ಡಿ. ರೇವಣ್ಣ ಕಿಡಿಕಾರಿದ್ದಾರೆ.

ಹಾಸನದಲ್ಲಿ ಮಾತನಾಡಿದ ಹೆಚ್.ಡಿ. ರೇವಣ್ಣ, ಈಗಾಗಲೇ ಅಡಿಗಲ್ಲು ಹಾಕಿದ್ದ ವಿಮಾನ ನಿಲ್ದಾಣಕ್ಕೆ ಈಗ ಮತ್ತೆ ಅಡಿಗಲ್ಲು ಹಾಕಲು ಹೊರಟಿದ್ದಾರೆ. ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಗೊತ್ತಿದೆಯೋ ಇಲ್ವೋ ನನಗೆ ಗೊತ್ತಿಲ್ಲ. ಅಡಿಗಲ್ಲು ಹಾಕಿದ ಬಳಿಕ 5 ವರ್ಷಗಳ ಕಾಲ ಕಾಮಗಾರಿ ಸ್ಥಗಿತಗೊಂಡಿತ್ತು. ಕೆಲಸ ಮತ್ತೆ ಪುನರಾರಂಭವಾಗಿ 1 ವರ್ಷ ಕಳೆದ ಬಳಿಕ ಈಗ ಮತ್ತೆ ಅಡಿಗಲ್ಲು ಹಾಕುತ್ತಿದ್ದಾರೆ ಎಂದು ಗುಡುಗಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಾಸನ ಬಿಜೆಪಿ ಮುಖಂಡರಿಗೆ ಮಾನ – ಮರ್ಯಾದೆ ಏನೂ ಇಲ್ಲ, ಆಸ್ಪತ್ರೆ ಕಟ್ಟಡ ನಿರ್ಮಾಣವೇ ಮುಗಿದಿಲ್ಲ, ಉದ್ಘಾಟನೆಗೆ ಹೊರಟಿದ್ದಾರೆ. ನಾನು ಜಾರಿಗೆ ತಂದ ಯೋಜನೆಗಳನ್ನು ಇವರು ಉದ್ಘಾಟಿಸಲು ಹೊರಟಿದ್ದಾರೆ. ಒಂದು ವೇಳೆ ಹಾಗೇನಾದರೂ ಮಾಡಿದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಚುನಾವಣೆ ಬರುತ್ತಿದ್ದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಚೆಕ್ ವಿತರಣೆ ಮಾಡುತ್ತಿದ್ದಾರೆ. ಹಳೆಯ ಚೆಕ್ ಆಗ ಕೊಡದೇ ಈಗ ಕೊಡುತ್ತಿದ್ದಾರೆ. ಎಣ್ಣೆ ಅಂಗಡಿ ಮಾಲೀಕರ ಪಾದದಡಿ ಬಿಜೆಪಿ ಇದೆ. ಕಾನೂನು ಬಾಹಿರವಾಗಿ 2-3 ಕೋಟಿ ವಸೂಲಿ ಮಾಡುತ್ತಿದ್ದಾರೆ. ಸಚಿವರೇ ಕೊಟ್ಟ ಎಣ್ಣೆ ಅಂಗಡಿ ಬೇಕಿದ್ದರೆ ಬಿಜೆಪಿಯವರು ಉದ್ಘಾಟಿಸಲಿ ಎಂದು ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular