HomeInternationalಹೋಳಿ ಹಬ್ಬಕ್ಕೆ ಶುಭ ಕೋರುವ ವೇಳೆ ಎಡವಟ್ಟು; ಟ್ರೋಲ್ ಗೊಳಗಾದ ಪಾಕ್ ಮಾಜಿ ಪ್ರಧಾನಿ...!

ಹೋಳಿ ಹಬ್ಬಕ್ಕೆ ಶುಭ ಕೋರುವ ವೇಳೆ ಎಡವಟ್ಟು; ಟ್ರೋಲ್ ಗೊಳಗಾದ ಪಾಕ್ ಮಾಜಿ ಪ್ರಧಾನಿ…!

ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಹೋಳಿ ಹಬ್ಬಕ್ಕೆ ಶುಭಕೋರುವ ವೇಳೆ ಮಾಡಿರುವ ಎಡವಟ್ಟಿನಿಂದಾಗಿ ಮುಜುಗರಕ್ಕೀಡಾಗಿದ್ದಾರೆ. ಹೋಳಿ ಹಬ್ಬಕ್ಕೆ ಶುಭ ಕೋರುತ್ತಾ ದೀಪದ ಎಮೋಜಿ ಬಳಸಿದ್ದಾರೆ.

ಇದರಿಂದಾಗಿ ಅವರ ಟ್ವೀಟ್ ಟ್ರೋಲ್ ಆಗ್ತಿದೆ. ಅವರು ಟ್ವಿಟರ್‌ನಲ್ಲಿ ಭಾರೀ ಟ್ರೋಲ್‌ಗೆ ಒಳಗಾಗಿದ್ದು ಅವರ ಪೋಸ್ಟ್ ನ ಸ್ಕ್ರೀನ್‌ಶಾಟ್‌ಗಳನ್ನು ಈಗ ಹಲವಾರು ವೆಬ್‌ಸೈಟ್‌ಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಹಿಂದೂ ಸಂಪ್ರದಾಯಗಳ ಪ್ರಕಾರ ದೀಪಾವಳಿ ಹಬ್ಬದ ಸಮಯದಲ್ಲಿ ಮನೆಯನ್ನು ಅಲಂಕರಿಸಲು ದೀಪವನ್ನು ಬಳಸಲಾಗುತ್ತದೆ ಮತ್ತು ದೀಪಗಳ ಹಬ್ಬವಾದ ದೀಪಾವಳಿಗೆ ಶುಭ ಹಾರೈಸಲು ದೀಪದ ಎಮೋಜಿಯನ್ನು ಬಳಸಲಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದರೆ ಹೋಳಿ ಹಬ್ಬಕ್ಕೆ ನವಾಜ್ ಷರೀಫ್ ದೀಪದ ಎಮೋಜಿ ಬಳಸಿದ್ದಾರೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಅವರಿಗೆ ದೀಪಾವಳಿ ಮತ್ತು ಹೋಳಿ ಹಬ್ಬಗಳ ನಡುವಿನ ವ್ಯತ್ಯಾಸದ ಬಗ್ಗೆ ಹೇಳ್ತಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular