
ಇಂತಹದೊಂದು ಘಟನೆ ಉತ್ತರ ಪ್ರದೇಶದ ಮುಜಫರ್ ನಗರದಲ್ಲಿ ನಡೆದಿದ್ದು, 80 ವರ್ಷದ ನಾಥುಸಿಂಗ್ ತಮ್ಮೆಲ್ಲ ಆಸ್ತಿಯನ್ನು ಉತ್ತರ ಪ್ರದೇಶದ ರಾಜ್ಯಪಾಲರ ಹೆಸರಿಗೆ ಬರೆದಿದ್ದು, ತಮ್ಮ ನಿಧನಾ ನಂತರ ಆ ಜಾಗದಲ್ಲಿ ಶಾಲೆ ಅಥವಾ ಆಸ್ಪತ್ರೆ ನಿರ್ಮಿಸಲು ಮನವಿ ಮಾಡಿದ್ದಾರೆ.
ಪ್ರಸ್ತುತ ವೃದ್ಧಾಶ್ರಮದಲ್ಲಿ ವಾಸವಾಗಿರುವ ನಾಥುಸಿಂಗ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ನನ್ನನ್ನು ಮಗ – ಸೊಸೆ ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ಆಸ್ತಿಯ ಮೇಲೆ ಅವರ ಕಣ್ಣಿತ್ತು ಹೊರತು ನನ್ನ ಯೋಗಕ್ಷೇಮವಲ್ಲ ಎಂದು ನೋವಿನಿಂದ ಹೇಳಿದ್ದಾರೆ.

