
ಮನೆ ಬಾಗಿಲ ಬಳಿ ಚಪ್ಪಲಿ ಇಡುವ ವಿಚಾರಕ್ಕೆ ದಂಪತಿಗಳು ಹಲವು ದಿನಗಳಿಂದ ಜಗಳವಾಡಿದ ನಂತರ ನೆರೆ ಮನೆಯವರನ್ನು ಕೊಂದಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೀರಾ ರೋಡ್ ಪೂರ್ವದ ನಯಾ ನಗರದಿಂದ ಮಹಿಳೆಯನ್ನು ಬಂಧಿಸಲಾಗಿದೆ ಆದರೆ ಆಕೆಯ ಪತಿ ಪರಾರಿಯಾಗಿದ್ದು ಇನ್ನೂ ಪತ್ತೆಯಾಗಿಲ್ಲ.
ದಂಪತಿಗಳು ಪರಸ್ಪರರ ಬಾಗಿಲಿನ ಬಳಿ ಚಪ್ಪಲಿ ಇಡುವುದಕ್ಕಾಗಿ ತಮ್ಮ ನೆರೆಹೊರೆಯವರೊಂದಿಗೆ ಆಗಾಗ್ಗೆ ಜಗಳವಾಡುತ್ತಿದ್ದರು. ಈ ಜಗಳ ಶನಿವಾರ ರಾತ್ರಿ ಕೊಲೆಗೆ ಕಾರಣವಾಯಿತು ಎಂದು ನಯಾ ನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಜಿಲಾನಿ ಸೈಯದ್ ಹೇಳಿದ್ದಾರೆ.
ಅಫ್ಸರ್ ಖಾತ್ರಿ (54) ಅವರು ಹೊಡೆದಾಟದಲ್ಲಿ ಗಾಯಗೊಂಡು ಸಾವನ್ನಪ್ಪಿದ್ದಾರೆ. ಮಹಿಳೆಯನ್ನು ಬಂಧಿಸಲಾಗಿದ್ದು, ಆಕೆಯ ಪತಿ ಸ್ಥಳದಿಂದ ಪರಾರಿಯಾಗಿದ್ದಾರೆ. ಅವರ ಮೇಲೆ ಕೊಲೆ ಆರೋಪ ಹೊರಿಸಲಾಗಿದೆ ಎಂದು ಅವರು ಹೇಳಿದರು.

