ಕಾಡುವ ಸಂಧಿವಾತಕ್ಕೆ ಅರಿಶಿಣ ಮದ್ದು

ಅರಿಶಿನದಿಂದಾಗುವ ಪ್ರಯೋಜನಗಳು ಒಂದೆರಡಲ್ಲ. ಸೌಂದರ್ಯಕ್ಕೂ, ಆರೋಗ್ಯಕ್ಕೂ ಬಳಕೆಯಾಗುವ ಇದರ ಬಾಹ್ಯ ಲೇಪನದಿಂದಲೂ ಹಲವು ಉಪಯೋಗಗಳಿವೆ. ಮಧ್ಯ ವಯಸ್ಸಿನ ಬಳಿಕ ಅಥವಾ ವಯಸ್ಸಾದವರನ್ನು ಕಾಡುವ ಸಂಧಿವಾತಕ್ಕೂ ಅರಿಶಿನದಿಂದ ಮದ್ದು ಮಾಡಬಹುದು.

ಸಂಶೋಧನೆಯೊಂದು 12 ವಾರಗಳ ಕಾಲ 70 ಮಂದಿ ಸಂಧಿವಾತ ಸಮಸ್ಯೆ ಇರುವವರನ್ನು ಬಳಸಿಕೊಂಡಿದ್ದರು. ಅಧ್ಯಯನ ಮುಗಿಯುವ ವೇಳೆ ಅವರ ಮೇಲೆ ಅರಿಶಿನ ಉತ್ತಮ ಪರಿಣಾಮ ಬೀರಿರುವುದು ಕಂಡು ಬಂದಿತ್ತು.

ದೈನಂದಿನ ಆಹಾರದಲ್ಲಿ ಅರಿಶಿನ ಬಳಸಿ. ಹಾಲಿನಲ್ಲಿ ಕುಡಿಯುವುದಾದರೆ ಚಿಟಿಕೆ ಅರಿಶಿನ ಸಾಕು. ಬೆಳಿಗ್ಗೆ ಹಾಗೂ ರಾತ್ರಿ ಹಾಲಿಗೆ ಅರಿಶಿನ ಉದುರಿಸಿ ತುಸು ಬೆಚ್ಚಗೆ ಇರುವಂತೆಯೇ ಕುಡಿಯಿರಿ. ಚಿಟಿಕೆ ಕರಿಮೆಣಸಿನ ಪುಡಿ ಬೆರೆಸುವುದೂ ಒಳ್ಳೆಯದು.

ಹಾಗೆಂದು ಹೆಚ್ಚಿನ ಪ್ರಮಾಣದ ಅರಿಶಿನ ಸೇವನೆ ಇತರ ಅಡ್ಡ ಪರಿಣಾಮಗಳನ್ನು ಮಾಡೀತು. ಶುದ್ಧ ಅರಿಶಿನವೆಂದು ಸಿಗುವ ವಸ್ತುಗಳಲ್ಲಿ ಕಲಬೆರಕೆ ಆಗಿರುವುದೇ ಹೆಚ್ಚು. ಸಾಧ್ಯವಾದರೆ ಅರಿಶಿನ ತುಂಡುಗಳಿಂದಲೇ ಪುಡಿ ಮಾಡಿಟ್ಟುಕೊಳ್ಳಿ. ಮಳಿಗೆಗಳ ಅರಿಶಿನದಲ್ಲಿ ಕೆಲವೊಮ್ಮೆ ಸೀಸವನ್ನು ಬೆರೆಸಲಾಗುತ್ತದೆ, ಹಾಗಾಗಿ ಎಚ್ಚರವಿರಲಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read