HomeKarnatakaBIG NEWS: ನಾಲ್ಕೈದು ದಿನಗಳೊಳಗೆ ಇನ್ನಿಬ್ಬರು ಹೊರ ಹೋಗಬಹುದು; ಅಚ್ಚರಿ ಮೂಡಿಸಿದ HDK ಹೇಳಿಕೆ

BIG NEWS: ನಾಲ್ಕೈದು ದಿನಗಳೊಳಗೆ ಇನ್ನಿಬ್ಬರು ಹೊರ ಹೋಗಬಹುದು; ಅಚ್ಚರಿ ಮೂಡಿಸಿದ HDK ಹೇಳಿಕೆ

ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ಪಕ್ಷಾಂತರ ಪರ್ವ ಆರಂಭವಾಗಿದ್ದು, ಜೆಡಿಎಸ್ ಶಾಸಕರುಗಳಾದ ಅರಸೀಕೆರೆ ಕ್ಷೇತ್ರದ ಶಿವಲಿಂಗೇಗೌಡ ಹಾಗೂ ಅರಕಲಗೂಡು ಕ್ಷೇತ್ರದ ಎ.ಟಿ. ರಾಮಸ್ವಾಮಿ ಪಕ್ಷ ತೊರೆಯುವುದು ಬಹುತೇಕ ಖಚಿತವಾಗಿದೆ.

ಇದರ ಮಧ್ಯೆ ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ, ನಾಲ್ಕೈದು ದಿನಗಳೊಳಗೆ ಇನ್ನಿಬ್ಬರು ಹೊರ ಹೋಗಬಹುದು ಇದಕ್ಕೆ ನಾನು ಹೆಚ್ಚಿನ ಮಹತ್ವ ನೀಡುವುದಿಲ್ಲ ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಅಲ್ಲದೆ ಈ ಹಿಂದೆ ಜೆಡಿಎಸ್ 20ರಿಂದ 30 ಸ್ಥಾನ ಗೆಲ್ಲುವುದು ಕಷ್ಟ ಎಂದು ಹೇಳುತ್ತಿದ್ದರು. ಆದರೆ ಜೆಡಿಎಸ್ ಎಲ್ಲರ ನಿರೀಕ್ಷೆಯನ್ನು ಮೀರಿ ಗೆಲ್ಲುತ್ತದೆ ಎಂದ ಅವರು, ಈ ಚುನಾವಣೆ ಮೂರೂ ಪಕ್ಷಗಳಿಗೆ ಅಗ್ನಿಪರೀಕ್ಷೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular