HomeKarnatakaBIG NEWS: ಗುಂಡಿಗಳಲ್ಲಿ ರಸ್ತೆ ಹುಡುಕಬೇಕಾದ ಸ್ಥಿತಿ; ಹಳೆ ಕಲ್ಲು ಹೊಸ ಬಿಲ್ಲು 40% ಕಮಿಷನ್...

BIG NEWS: ಗುಂಡಿಗಳಲ್ಲಿ ರಸ್ತೆ ಹುಡುಕಬೇಕಾದ ಸ್ಥಿತಿ; ಹಳೆ ಕಲ್ಲು ಹೊಸ ಬಿಲ್ಲು 40% ಕಮಿಷನ್ ಕಾಮಗಾರಿ

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ಕಮಿಷನ್ ದುರಾಸೆಗೆ ಬೆಂಗಳೂರು ರಸ್ತೆಗಳು ಕಿತ್ತುಹೋಗಿವೆ ಎಂದು ರಾಜ್ಯ ಕಾಂಗ್ರೆಸ್ ಘಟಕ ವಾಗ್ದಾಳಿ ನಡೆಸಿದೆ.

ಬೆಂಗಳೂರಿನ ಕೆಲ ರಸ್ತೆಗಳನ್ನು ಪಾದಚಾರಿಗಳಿಗೆ ಮಾತ್ರವೆಂದು ಗುರುತಿಸುತ್ತೇವೆ ಎಂದಿತ್ತು ಬಿಜೆಪಿ ಸರ್ಕಾರ. ಆದರೆ ಈಗ ಪಾದಚಾರಿಗಳು ಗುಂಡಿಗಳಲ್ಲಿ ರಸ್ತೆಯನ್ನೇ ಹುಡುಕುವಂತಾಗಿದೆ! ಎಂದು ಟೀಕಿಸಿದೆ.

ಪಾದಚಾರಿ ಮಾರ್ಗಗಳಲ್ಲಿ “ಹಳೆ ಕಲ್ಲು ಹೊಸ ಬಿಲ್ಲು” ಎಂಬ 40% ಕಮಿಷನ್ ಕಾಮಗಾರಿ ನಡೆಸಿ ಓಡಾಡಲು ಬರದಂತ ಸ್ಥಿತಿ ನಿರ್ಮಿಸಲಾಗಿದೆ ಎಂದು ಬಿಜೆಪಿಗೆ ಕಾಂಗ್ರೆಸ್ ಚಾಟಿ ಬೀಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular