HomeKarnatakaBIG NEWS: ಮತ್ತೆ ಏರಿಕೆಯಾದ LPG ದರ; ಜನರು ಹೈರಾಣು; ಕಾಂಗ್ರೆಸ್ ಆಕ್ರೋಶ

BIG NEWS: ಮತ್ತೆ ಏರಿಕೆಯಾದ LPG ದರ; ಜನರು ಹೈರಾಣು; ಕಾಂಗ್ರೆಸ್ ಆಕ್ರೋಶ

ಬೆಂಗಳೂರು: ದೇಶದಲ್ಲಿ ದಿನದಿಂದ ದಿನಕ್ಕೆ ಬೆಲೆ ಏರಿಕೆ ಬಿಸಿಯಿಂದ ಜನರು ಕಂಗಾಲಾಗುತ್ತಿದ್ದಾರೆ. ಎಲ್ ಪಿ ಜಿ ಸಿಲಿಂಡರ್ ದರ ರಾತ್ರೋ ರಾತ್ರಿ ಹೆಚ್ಚಳ ಮಾಡಲಾಗಿದೆ.

ಎಲ್ ಪಿ ಜಿ ಸಿಲಿಂಡರ್ ದರ 50 ರೂಪಾಯಿ ಹೆಚ್ಚಳ ಮಾಡಿ ಆದೇಶ ಹೊರಡಿಸಲಾಗಿದೆ. 14 ಕೆಜಿ ಸಿಲಿಂಡರ್ ದರ 1055.50 ರೂ ಇದ್ದದ್ದು ಈಗ ಮತ್ತೆ 50 ರೂಪಾಯಿ ಏರಿಕೆಯಾಗಿದೆ.

19 ಕೆಜಿ ಕಮರ್ಷಿಯಲ್ ಸಿಲಿಂಡರ್ ದರ 350 ರೂಪಾಯಿ ಏರಿಕೆಯಾಗಿದ್ದು, 2190.50 ರೂ ಆಗಿದೆ. ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ದರ ಏರುತ್ತಿದ್ದು, ಜನರನ್ನು ಹೈರಾಣಾಗಿಸಿದೆ ಎಂದು ವಿಪಕ್ಷ ಕಾಂಗ್ರೆಸ್, ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular