HomeKarnatakaBIG NEWS: ಪಕ್ಷದಲ್ಲಿದ್ದಾಗ ಕಾಣದ ಕುಟುಂಬ ರಾಜಕಾರಣ, ಪಕ್ಷ ತೊರೆಯುವಾಗ ಕಾಣುತ್ತಿದೆಯೇ....? ಶಿವಲಿಂಗೇಗೌಡರ ವಿರುದ್ಧ HDK...

BIG NEWS: ಪಕ್ಷದಲ್ಲಿದ್ದಾಗ ಕಾಣದ ಕುಟುಂಬ ರಾಜಕಾರಣ, ಪಕ್ಷ ತೊರೆಯುವಾಗ ಕಾಣುತ್ತಿದೆಯೇ….? ಶಿವಲಿಂಗೇಗೌಡರ ವಿರುದ್ಧ HDK ವಾಗ್ದಾಳಿ

ಹಾಸನ: ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಲು ಸಜ್ಜಾಗಿರುವ ಶಾಸಕ ಶಿವಲಿಂಗೇಗೌಡರ ವಿರುದ್ಧ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮತ್ತೆ ವಾಗ್ದಾಳಿ ನಡೆಸಿದ್ದಾರೆ.

ಶಿವಲಿಂಗೇಗೌಡರು ನಮ್ಮ ಬಗ್ಗೆ ವಿಷಯ ಬಹಿರಂಗ ಪಡಿಸುತ್ತೇನೆ ಅಂತಾರೆ. ಅವರನ್ನು ತಡೆಯುತ್ತಿರುವವರು ಯಾರು? ದಾರಾಳವಾಗಿ ಬಹಿರಂಗಪಡಿಸಲಿ ಎಂದು ಹೇಳಿದ್ದಾರೆ.

ಶಿವಲಿಂಗೇಗೌಡರು ಪಕ್ಷದಲ್ಲಿ ಬೆಳೆಯುವಾಗ ನೆಲೆ ಕಂಡುಕೊಳ್ಳುವಾಗ ಕಾಣದ ಕುಟುಂಬ ರಾಜಕಾರಣ ಈಗ ಪಕ್ಷ ಬಿಟ್ಟು ಹೋಗುವಾಗ ಕಾಣುತ್ತಿದೆಯೇ? ಅವರ ಬೆದರಿಕೆಗಳಿಗೆ ಬೇರೆಯವರು ಹೆದರಬಹುದು ನಾನು ಹೆದರುವುದಿಲ್ಲ ಎಂದು ಗುಡುಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular