ಖ್ಯಾತ ಬಾಣಸಿಗ ಸಂಜೀವ್ ಕಪೂರ್​ಗೇ ಕಳಪೆ ಆಹಾರ: ಕ್ಷಮೆ ಕೋರಿದ ಏರ್​ ಇಂಡಿಯಾ

ಖ್ಯಾತ ಬಾಣಸಿಗ ಸಂಜೀವ್ ಕಪೂರ್ ಅಡುಗೆ ಮಾಡುವುದರಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದಾರೆ. ಆದರೆ ಇವರಿಗೇ ಕೆಟ್ಟ ಅಡುಗೆಯ ರುಚಿ ವಿಮಾನದಲ್ಲಿ ಆಗಿದ್ದು ಅದರ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಶೇರ್​ಮಾಡಿಕೊಂಡಿದ್ದಾರೆ.

ಏರ್ ಇಂಡಿಯಾ ವಿಮಾನದಲ್ಲಿ ನೀಡಿದ ಆಹಾರದ ಕುರಿತು ಅವರು ಅಸಮಾಧಾನ ಹೊರಹಾಕಿದ್ದಾರೆ. ಏರ್ ಇಂಡಿಯಾ ಸರ್ವ್ ಮಾಡಿದ ಆಹಾರದ ಫೋಟೋವನ್ನು ಸಂಜೀವ್ ಕಪೂರ್ ಹಂಚಿಕೊಂಡಿದ್ದಾರೆ. ನಾಗ್ಪುರ -ಮುಂಬೈ 0740 ವಿಮಾನದಲ್ಲಿ ಹೋಗುವಾಗ ಆಗಿರುವ ಅನುಭವವನ್ನು ಶೇರ್​ ಮಾಡಿಕೊಂಡಿದ್ದಾರೆ.

ಕಲ್ಲಂಗಡಿ, ಸೌತೆಕಾಯಿ, ಟೊಮೇಟೊ ಮತ್ತು ತಣ್ಣಗಾದ ಚಿಕನ್ ಟಿಕ್ಕಾ ಕೊಡಲಾಗಿದೆ. ಮೇಯೊ ಜೊತೆ ಎಲೆಕೋಸಿನ ಸಣ್ಣ ತುಂಡುಗಳನ್ನು ತುಂಬಿದ ಸ್ಯಾಂಡ್​ವಿಚ್ ನೀಡಲಾಗಿದೆ. ಸ್ಪಂಜಿನ ಬಣ್ಣದ ಸ್ವೀಟ್ ಕ್ರೀಮ್ ಮತ್ತು ಹಳದಿ ಗೇಜ್ ಶುಗರ್ ಸಿರಪ್ ನೀಡಲಾಗಿದೆ. ಇದನ್ನು ಸಾಮಾನ್ಯವಾಗಿ ಜನರು ತಿನ್ನುತ್ತಾರೆಯೇ ಎನ್ನುವುದು ಅವರ ಪ್ರಶ್ನೆ. ‘ಏರ್ ಇಂಡಿಯಾವನ್ನು ಎಚ್ಚರಗೊಳಿಸಿ’ ಎಂದಿದ್ದಾರೆ. ಈ ಟ್ವೀಟ್​ ನೋಡಿದ ಏರ್​ ಇಂಡಿಯಾ ಕ್ಷಮೆ ಕೋರಿದೆ.

https://twitter.com/SanjeevKapoor/status/1630068889953419265?ref_src=twsrc%5Etfw%7Ctwcamp%5Etweetembed%7Ctwterm%5E1630068889953419265%7Ctwgr%5E943b3800391f101e94268a86f4a302c4f20f2f20%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fchef-sanjeev-kapoor-hits-out-at-air-india-for-serving-cold-chicken-tikka-with-watermelon-airlines-tweets-apologies

https://twitter.com/SanjeevKapoor/status/1630068907510833152?ref_src=twsrc%5Etfw%7Ctwcamp%5Etweetembed%7Ctwterm%5E1630074973774807040%7Ctwgr%5E943b3800391f101e94268a86f4a302c4f20f2f20%7Ctwcon%5Es2_&ref_url=https%3A%2F%2Fwww.freepressjournal.in%2Fviral%2Fchef-sanjeev-kapoor-hits-out-at-air-india-for-serving-cold-chicken-tikka-with-watermelon-airlines-tweets-apologies

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read