HomeIndiaಬಾಲ್ಯದ ದಿನಗಳನ್ನು ನೆನಪಿಸುತ್ತೆ ಈ ನಾಣ್ಯಗಳು....! ನಿಮ್ಮ ಅಭಿಪ್ರಾಯವನ್ನೂ ಕಮೆಂಟ್‌ ಮಾಡಿ

ಬಾಲ್ಯದ ದಿನಗಳನ್ನು ನೆನಪಿಸುತ್ತೆ ಈ ನಾಣ್ಯಗಳು….! ನಿಮ್ಮ ಅಭಿಪ್ರಾಯವನ್ನೂ ಕಮೆಂಟ್‌ ಮಾಡಿ

ಇಂಡಿಯನ್ ಅಡ್ಮಿನಿಸ್ಟ್ರೇಟಿವ್ ಸರ್ವೀಸ್ (IAS) ಅಧಿಕಾರಿ ಅವನೀಶ್ ಶರಣ್ ಆಗಾಗ್ಗೆ ಇಂಟರ್ನೆಟ್ ಬಳಕೆದಾರರ ಆಸಕ್ತಿಯನ್ನು ಕೆರಳಿಸುವ ಆಕರ್ಷಕ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಾರೆ. ಈಗ ಅವರು ವಿಶೇಷವಾಗಿ ಈಗಿನ ಮಕ್ಕಳಿಗಾಗಿ ಕೆಲವೊಂದು ಹಳೆಯ ನಾಣ್ಯಗಳ ಚಿತ್ರಗಳನ್ನು ಶೇರ್​ ಮಾಡಿದ್ದಾರೆ.

ಐಎಎಸ್ ಅಧಿಕಾರಿಯು 1968 ರಿಂದ ಆರು ವಿಭಿನ್ನ ಭಾರತೀಯ ಪೈಸೆಗಳನ್ನು ತೋರಿಸುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಈ ನಾಣ್ಯಗಳಿಂದ ನೀವು ಏನನ್ನಾದರೂ ಖರೀದಿ ಮಾಡಿದ್ದು ನೆನಪಿದೆಯಾ ಎಂದು ನೆಟ್ಟಿಗರನ್ನು ಅವರು ಪ್ರಶ್ನಿಸಿದ್ದಾರೆ.

ಇವರು ಚಿತ್ರ ಶೇರ್​ ಮಾಡಿರುವ ಕೆಲವೇ ಗಂಟೆಗಳಲ್ಲಿ ಹಲವಾರು ಕಮೆಂಟ್​ಗಳು ಬಂದಿವೆ. ಒಂದು ದಶಲಕ್ಷಕ್ಕೂ ಹೆಚ್ಚುಮಂದಿ ಇದನ್ನು ನೋಡಿದ್ದು, 15 ಸಾವಿರಕ್ಕೂ ಅಧಿಕ ಮಂದಿ ಲೈಕ್ಸ್​ ಮಾಡಿದ್ದಾರೆ. ತಮ್ಮ ಕಾಲದ ನಾಣ್ಯಗಳ ಕುರಿತು ನೆನಪಿನ ಬುತ್ತಿಯನ್ನು ಹಲವರು ಬಿಚ್ಚಿಟ್ಟಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular