
ಬೆಳಗಾವಿಯ ಕಿತ್ತೂರು ರಾಣಿ ಚೆನ್ನಮ್ಮ ಸರ್ಕಲ್ ನಿಂದ ಆರಂಭವಾಗಿರುವ ರೋಡ್ ಶೋ 10 ಕಿ.ಮೀವರೆಗೆ ಸಾಗಿದ್ದು, ಸಂಬಾಜಿ ವೃತ್ತ, ಕಿರ್ಲೋಸ್ಕರ್ ರಸ್ತೆ, ಶನಿ ಮಂದಿರ, ಕಪಿಲೇಶ್ವರ ದೇವಸ್ಥಾನ ರಸ್ತೆ, ಶಿವಾಜಿ ಗಾರ್ಡನ್, ಓಲ್ಡ್ ಪಿಬಿ ರೋಡ್ ಮಾರ್ಗವಾಗಿ ಪ್ರಧಾನಿ ಮೋದಿ ಮಾಲಿನಿ ಸಿಟಿ ತಲುಪಲಿದ್ದಾರೆ.
ರಸ್ತೆಯುದ್ದಕ್ಕೂ ಪ್ರಧಾನಿ ಮೋದಿಯವರಿಗೆ ಹೂ ಮಳೆಗರೆದು, ವಾದ್ಯಗಳೊಂದಿಗೆ ಜನತೆ ಸ್ವಾಗತಿಸಿದರು.

