HomeEntertainmentಇಲ್ಲಿದೆ ನೀವು ನೋಡಿರದ '3 ಈಡಿಯಟ್ಸ್' ನ ಕರೀನಾ ಕಪೂರ್ ಚಿತ್ರಗಳು

ಇಲ್ಲಿದೆ ನೀವು ನೋಡಿರದ ‘3 ಈಡಿಯಟ್ಸ್’ ನ ಕರೀನಾ ಕಪೂರ್ ಚಿತ್ರಗಳು

ವಿಧು ವಿನೋದ್ ಚೋಪ್ರಾ ನಿರ್ಮಾಣದ, ರಾಜಕುಮಾರ್ ಹಿರಾನಿ ನಿರ್ದೇಶನದ ‘3 ಈಡಿಯಟ್ಸ್’ ಸಿನಿಮಾ ಬಾಲಿವುಡ್ ಚಿತ್ರರಂಗದಲ್ಲಿ ಹೊಸ ದಾಖಲೆಯನ್ನೇ ಬರೆದಿತ್ತು. ಶಿಕ್ಷಣ ವ್ಯವಸ್ಥೆಯಲ್ಲಿನ ಲೋಪಗಳನ್ನು ಎತ್ತಿ ತೋರಿಸುವಲ್ಲಿ ಈ ಚಿತ್ರ ಯಶಸ್ವಿಯಾಗಿತ್ತು.

ಈ ಚಿತ್ರದಲ್ಲಿ ರಾಂಚು ಪಾತ್ರದಲ್ಲಿ ಅಮೀರ್ ಖಾನ್, ಫರಾನ್ ಪಾತ್ರದಲ್ಲಿ ಮಾಧವನ್ ಹಾಗೂ ರಾಜು ಪಾತ್ರದಲ್ಲಿ ಶರ್ಮಾನ್ ಜೋಶಿ ಕಾಣಿಸಿಕೊಂಡಿದ್ದು, ಕರೀನಾ ಕಪೂರ್ ಪಿಯಾ ಪಾತ್ರದಲ್ಲಿ ಮಿಂಚಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಟ ಬೊಮನ್ ಇರಾನಿ ವೀರೂ ಸಹಸ್ರಬುದ್ಧಿ ಪಾತ್ರದಲ್ಲಿ ಅಭಿನಯಿಸಿದ್ದು, ಕರೀನಾ ಕಪೂರ್ ಅವರ ಪುತ್ರಿಯಾಗಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಕರೀನಾ ಮೆಡಿಕಲ್ ವಿದ್ಯಾರ್ಥಿನಿಯಾಗಿದ್ದು, ಆಕೆಯ ಪಾತ್ರದ ಯಾರೂ ನೋಡಿರದ ಕೆಲವೊಂದು ಚಿತ್ರಗಳನ್ನು ನಿರ್ಮಾಪಕ ವಿಧು ವಿನೋದ್ ಚೋಪ್ರಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಈಗ ಫುಲ್ ವೈರಲ್ ಆಗಿವೆ.

For Latest News Updates, Join Our Whatsapp Community🚩
RELATED ARTICLES

Most Popular