alex Certify ಬ್ಯಾಂಕ್ ಮ್ಯಾನೇಜರ್ ನಿಂದಲೇ 2.36 ಕೋಟಿ ರೂ. ವಂಚನೆ: ಆನ್ಲೈನ್ ಜೂಜಿಗೆ ಹಣ ಕಟ್ಟಿದ ಭೂಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ಯಾಂಕ್ ಮ್ಯಾನೇಜರ್ ನಿಂದಲೇ 2.36 ಕೋಟಿ ರೂ. ವಂಚನೆ: ಆನ್ಲೈನ್ ಜೂಜಿಗೆ ಹಣ ಕಟ್ಟಿದ ಭೂಪ

ಹಾವೇರಿ: ಐಸಿಐಸಿಐ ಬ್ಯಾಂಕ್ ಡೆಪ್ಯೂಟಿ ಮ್ಯಾನೇಜರ್ ನಿಂದ ಹಣ ದುರ್ಬಳಕೆ ಪ್ರಕರಣ ಬೆಳಕಿಗೆ ಬಂದಿದೆ. ಹಾವೇರಿ ಬ್ಯಾಂಕ್ ಶಾಖೆಯ ವೀರೇಶ ಸಾಲಿಮಠ ಹಣ ದುರ್ಬಳಕೆ ಮಾಡಿಕೊಂಡವರು ಎಂದು ಹೇಳಲಾಗಿದೆ.

ಸುಮಾರು 2.36 ಕೋಟಿ ರೂಪಾಯಿ ದುರ್ಬಳಕೆ ಮಾಡಿಕೊಳ್ಳಲಾಗಿದೆ.  ಹಾವೇರಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಶಿವಕುಮಾರ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಆನ್ಲೈನ್ ಜೂಜು ಆಟಕ್ಕೆ ಬಲಿಯಾಗಿ ಬ್ಯಾಂಕ್ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ವಿವಿಧ ಖಾತೆಗಳಿಗೆ ಹಣ ವರ್ಗಾವಣೆ ಮಾಡಿ ದುರ್ಬಳಕೆ ಮಾಡಿಕೊಳ್ಳಲಾಗಿದೆ.

ಬ್ಯಾಂಕ್ ಮ್ಯಾನೇಜರ್ ನೀಡಿದ ದೂರಿನ ಅನ್ವಯ ತನಿಖೆ ಮಾಡಿ ಪ್ರಕರಣ ದಾಖಲಿಸಲಾಗಿದೆ. ಡೆಪ್ಯುಟಿ ಮ್ಯಾನೇಜರ್ ಗೆ ಪ್ರತಿ ದಿನ 5 ಲಕ್ಷ ರೂ. ವಿಲೇವಾರಿ ಮಾಡುವ ಅವಕಾಶ ಇತ್ತು. ಬ್ಯಾಂಕಿನವರು ಕೊಟ್ಟ ಅವಕಾಶವನ್ನು ಆನ್ ಲೈನ್ ಜೂಜಿಗೆ ಹಣ ಕಟ್ಟಿ ದುರ್ಬಳಕೆ ಮಾಡಿಕೊಂಡಿದ್ದಾರೆ. 2 ಕೋಟಿ ರೂಪಾಯಿಗೂ ಹೆಚ್ಚು ಹಣ ದುರ್ಬಳಕೆ ಮಾಡಿಕೊಂಡಿರುವುದು ಗೊತ್ತಾಗಿದೆ. ಡೆಪ್ಯೂಟಿ ಮ್ಯಾನೇಜರ್ ಆರೋಪಿ ವೀರೇಶ ಸಾಲಿಮಠ ಅವರನ್ನು ಬಂಧಿಸಲಾಗಿದೆ. ಪ್ರಕರಣ ಸಿಐಡಿಗೆ ವಹಿಸಲಾಗಿದ್ದು, ಇನ್ನುಳಿದ ಮಾಹಿತಿ ಗೊತ್ತಾಗಬೇಕು ಎಂದು ಹಾವೇರಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಶಿವಕುಮಾರ್ ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...