ಮಕ್ಕಳು ಅಂದ್ರೆ ಮುಗ್ಧತೆಯ ಪ್ರತಿರೂಪ. ಅದರಲ್ಲೂ ಪುಟ್ಟ ಪುಟ್ಟ ಮಕ್ಕಳು ಏನೆ ಮಾಡಿದರೂ ಚೆಂದ. ಸಾಮಾನ್ಯವಾಗಿ ಮನೆಯಲ್ಲಿ ಇಬ್ಬರು ಮಕ್ಕಳಿದ್ರೆ ದೊಡ್ಡ ಮಗುವಿಗೆ ಸ್ವಲ್ಪ ಹೆಚ್ಚಿನ ಜವಾಬ್ದಾರಿ ಇದ್ದೇ ಇರುತ್ತೆ.
ಇನ್ನು ಮ್ಯಾಜಿಕ್ ಅನ್ನೋ ಮಾಯೆಗೆ ಮರುಳಾಗಾದೆ ಇರೋರು ಯಾರೂ ಇಲ್ಲ ಬಿಡಿ. ಇಲ್ಲೊಬ್ಬ ಪುಟ್ಟ ಪೋರಿ ತನ್ನ ಮಾಯಾಜಾಲದಿಂದ ಮೋಡಿ ಮಾಡೋಕೆ ಹೊರಟ ಮುಗ್ದ ಪ್ರದರ್ಶನ ಈಗ ವೈರಲ್ ಆಗಿದೆ.
ರೈಲ್ವೇ ಇಲಾಖೆಯ ಅಧಿಕಾರಿಯೊಬ್ಬರು ಹಂಚಿಕೊಂಡಿರೋ ಒಬ್ಬ ತುಂಟ ಪೋರಿ ಮತ್ತೆ ಅವಳ ಪುಟ್ಟ ತಮ್ಮನ ವೀಡಿಯೋ, ಅಕ್ಕ-ತಮ್ಮನ ಬಾಂಧವ್ಯವನ್ನು ಸುಂದರವಾಗಿ ಸೆರೆ ಹಿಡಿಯಲಾಗಿದೆ, ಇದನ್ನು ನೋಡಿದರೆ ನಿಮಗೆ ನಿಮ್ಮ ಬಾಲ್ಯದ ನೆನಪಾಗಿ ಮುಖದ ಮೇಲೆ ನಗು ಮೂಡದೇ ಇರೋದಿಲ್ಲ.
ವೀಡಿಯೋದಲ್ಲಿ ಪೋರಿ ತನ್ನ ತಮ್ಮನ ಜೊತೆ ಸೇರಿ ಮ್ಯಾಜಿಕ್ ಟ್ರಿಕ್ ತೋರಿಸೋದು ಕಂಡು ಬರುತ್ತೆ. ಪೋರಿ ತನ್ನ ತಮ್ಮನಿಗೆ ಅಡ್ಡಲಾಗಿ ಒಂದು ಟವಲ್ ಅನ್ನ ಕೆಲವು ಕ್ಷಣಗಳವರೆಗೆ ಹಿಡಿದು, ನಂತರ ಅದನ್ನು ಇಳಿಸಿದಾಗ ಪುಟ್ಟ ಹುಡುಗ ಕಾಣಿಸುವುದಿಲ್ಲ.
ತಮಾಷೆ ಅಂದರೆ ಹುಡುಗ ಅಕ್ಕನ ಬಲಭಾಗದಲ್ಲಿರುವ ಪರದೆ ಹಿಂದೆ ಅಡಗಿ ಕೂತಿದ್ದು, ಹುಡುಗನ ಕಾಲುಗಳು ಕಾಣಿಸ್ತಿರತ್ತೆ. ಆದರೆ ತಮ್ಮನನ್ನ ಮಾಯ ಮಾಡುವ ತನ್ನ ಜಾದೂ ಟ್ರಿಕ್ ಯಶಸ್ವಿಯಾಯಿತು ಅಂತ ತಿಳಿದ ಬಾಲೆ ಕ್ಯಾಮರಾ ಎದುರು ಬಗ್ಗಿ ಪೋಸ್ ಕೊಡ್ತಾಳೆ. ಆಗ ತಮ್ಮನ ಕಾಲುಗಳು ಪರದೆಯ ಆಚೆ ಕಾಣ್ತಾ ಇರೋದನ್ನ ಕಂಡ ಪೋರಿ, ತಮ್ಮನ ಹಿಂಭಾಗಕ್ಕೆ ಸ್ವಲ್ಪ ಜೋರಾಗೇ ಕಾಲಿನಿಂದ ಒದೀತಾಳೆ!
ಈ ವೀಡಿಯೋ ಅನ್ನು 2 ಲಕ್ಷಕ್ಕಿಂತ ಅಧಿಕ ಜನ ವೀಕ್ಷಿಸಿದ್ದು, ಅನೇಕ ಜನ ಮೆಚ್ಚುಗೆ ಸೂಚಿಸಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಕೆಲವರು ‘ಇದು ನಾವು ಇದುವರೆಗೆ ನೋಡಿರುವ ಎಲ್ಲಾ ಜಾದೂ ಟ್ರಿಕ್ ಗಳಲ್ಲಿ ಬೆಸ್ಟ್’ ಎಂದರೆ, ಇನ್ನೂ ಕೆಲವರು ಚಿಕ್ಕ ಹುಡುಗಿ ತಮ್ಮನಿಗೆ ಒದೆಯುವುದನ್ನು ಇಷ್ಟ ಪಟ್ಟು, ‘ಅಬ್ಬಾ! ಎಂಥಾ ಒದೆತ!’ ಅಂತ ತಮಾಷೆ ಮಾಡಿದ್ದಾರೆ. ಈ ವೀಡಿಯೋ ಬಗ್ಗೆ ನಿಮ್ಮ ಅಭಿಪ್ರಾಯ ಏನು?
https://twitter.com/Ananth_IRAS/status/1629013135591104517?ref_src=twsrc%5Etfw%7Ctwcamp%5Etweetembed%7Ctwterm%5E1629013135591104517%7Ctwgr%5Ebe4cd175cfc19107084face19d032913d0623ca0%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Flittle-girls-vanishing-magic-trick-with-her-brother-has-a-hilarious-ending-too-cute-says-internet-2339284-2023-02-24