
ಫೆಬ್ರವರಿ 9 ರಂದು ಎಂದಿನಂತೆ ಬಾಲಕಿ ಶಾಲೆಗೆ ತೆರಳಲು 7:30ಕ್ಕೆ ಸಿದ್ಧವಾಗಿದ್ದು, ಆಕೆಯನ್ನು ಶಾಲೆಗೆ ಡ್ರಾಪ್ ಮಾಡುತ್ತಿದ್ದ ಸಹೋದರ ಅಂದು ಹೋಗಲು ಸಾಧ್ಯವಾಗಿರಲಿಲ್ಲ ಹೀಗಾಗಿ ಆಕೆ ಬಸ್ಸಿನಲ್ಲಿ ತೆರಳಿದ್ದಳು.
ಆದರೆ 11 ಗಂಟೆಗೆ ವಾಪಸ್ ಬಾರದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಎಲ್ಲೆಡೆ ಹುಡುಕಾಡಿ ಸಿಗದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದರು. ಇದರ ಮಧ್ಯೆ 11-50 ರ ಸುಮಾರಿಗೆ ಬಾಲಕಿ ತಾಯಿಯ ಮೊಬೈಲ್ ಗೆ ಮಿಸ್ ಕಾಲ್ಡ್ ಒಂದು ಬಂದಿತ್ತು.
ಅದಕ್ಕೆ ವಾಪಸ್ ಕರೆ ಮಾಡಿದಾಗ ಸ್ವಿಚ್ಡ್ ಆಫ್ ಆಗಿತ್ತು. ಅಪಹರಣ ಪ್ರಕರಣ ದಾಖಲಿಸಿಕೊಂಡಿದ್ದು ಪೊಲೀಸರು ಈ ಕರೆಯ ಬೆನ್ನತ್ತಿ ಹೋದಾಗ ಘೋರ ಕೃತ್ಯ ಬಹಿರಂಗವಾಗಿದೆ. ರೋಹಿತ್ ಎಂಬಾತನನ್ನು ಈಗ ಬಂಧಿಸಲಾಗಿದ್ದು, ಅಪಹರಣ ಹಾಗೂ ಕೊಲೆ ಯಾವ ಕಾರಣಕ್ಕೆ ನಡೆದಿದೆ ಎಂಬುದರ ವಿಚಾರಣೆ ನಡೆಸಲಾಗುತ್ತಿದೆ.

