HomeKarnatakaBIG NEWS: ದೇವೇಗೌಡರು ನಮ್ಮ ಆದರ್ಶ ಎಂದ ಯಡಿಯೂರಪ್ಪ; ಸಿದ್ದರಾಮಯ್ಯರನ್ನು ಶ್ಲಾಘಿಸಿದ BSY; ಅಧಿವೇಶನದ ಕೊನೆ...

BIG NEWS: ದೇವೇಗೌಡರು ನಮ್ಮ ಆದರ್ಶ ಎಂದ ಯಡಿಯೂರಪ್ಪ; ಸಿದ್ದರಾಮಯ್ಯರನ್ನು ಶ್ಲಾಘಿಸಿದ BSY; ಅಧಿವೇಶನದ ಕೊನೆ ದಿನ ಕೊನೆಯ ಭಾಷಣ ಮಾಡಿದ ಮಾಜಿ ಸಿಎಂ

ಬೆಂಗಳೂರು: ವಿಧಾನಮಂಡಲ ಅಧಿವೇಶನದ ಕೊನೆ ದಿನವಾದ ಇಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಮ್ಮ ಕೊನೆ ಭಾಷಣ ಮಾಡಿದ್ದು, ಇದು ನನ್ನ ಕೊನೆ ಅಧಿವೇಶನ. ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡುವುದಾಗಿ ಹೇಳಿದರು.

ವಿಧಾನಸಭೆಯಲ್ಲಿ ಮಾತನಾಡಿದ ಯಡಿಯೂರಪ್ಪ, ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸಲ್ಲ ಎಂದು ಈಗಾಗಲೇ ನಾನು ಹೇಳಿದ್ದೇನೆ. ಸದನದಿಂದ ಹೊರಗಿದ್ದೇ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪ್ರಯತ್ನಿಸುತ್ತೇನೆ. ಹೆಚ್ಚಿನ ಸಂಖ್ಯೆಯಲ್ಲಿ ಸದನಕ್ಕೆ ಮಹಿಳೆಯರು ಆಯ್ಕೆಯಾಗಿ ಬರಬೇಕು. ಇಷ್ಟು ವರ್ಷಗಳ ಕಾಲ ನನಗೆ ಅವಕಾಶ ನೀಡಿದ ಶಿಕಾರಿಪುರ ತಾಲೂಕಿನ ಜನರಿಗೆ ನಾನು ಚಿರಋಣಿಯಾಗಿರುತ್ತೇನೆ ಎಂದರು.

ಫೆ.27ಕ್ಕೆ ನನಗೆ 80 ವರ್ಷ ತುಂಬುತ್ತದೆ. ಶಿವಮೊಗ್ಗ ಏರ್ ಪೋರ್ಟ್ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಬರುತ್ತೇನೆ ಎಂದು ಹೇಳಿರುವುದು ನನಗೆ ಖುಷಿ ತಂದಿದೆ. ಸಮಾಧಾನ, ತೃಪ್ತಿ ತಂದಿದೆ ಎಂದರು. ಇದೇ ವೇಳೆ ಅಟಲ್ ಬಿಹಾರಿ ವಾಜಪೇಯಿ, ಮುರಳಿ ಮನೋಹರ ಜೋಶಿ ಅವರನ್ನು ಸ್ಮರಿಸಿದ ಯಡಿಯೂರಪ್ಪ, ನಾನು ಇಂದು ಇಷ್ಟು ಎತ್ತರಕ್ಕೆ ಬೆಳೆಯಲು ಆರ್ ಎಸ್ ಎಸ್ ಕಾರಣ. ಆರ್ ಎಸ್ ಎಸ್ ನಲ್ಲಿ ಸಿಕ್ಕಿದ ತರಬೇತಿಯಿಂದ ಇಷ್ಟೆಲ್ಲ ಸ್ಥಾನಮಾನ ಸಿಕ್ಕಿದೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಮಗೆಲ್ಲರಿಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಅದರ್ಶ. ಅವರು ಈ ವಯಸ್ಸಿನಲ್ಲಿಯೂ ದೇಶ, ರಾಜ್ಯದ ಬಗ್ಗೆ ಸಲಹೆ ಸೂಚನೆಗಳನ್ನು ನೀಡುತ್ತಾರೆ. ಸಮಸ್ಯೆಗಳ ಬಗ್ಗೆ ಅಧ್ಯಯನ ಮಾಡುತ್ತಾರೆ. ಮಾರ್ಗದರ್ಶನವನ್ನು ನೀಡುತ್ತಾರೆ. ದೇವೇಗೌಡರನ್ನು ನೋಡಿ ನಾವು ಕಲಿಯಬೇಕಿದೆ ಎಂದರು.

ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಅವರು ಉತ್ತಮ ಆಡಳಿತ ನಡೆಸುತ್ತಿದ್ದಾರೆ, ಒಳ್ಳೆಯ ಯೋಜನೆಗಳನ್ನು ಘೋಷಿಸಿದ್ದಾರೆ ಎಂದರು. ಇದೇ ವೇಳೆ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಶ್ಲಾಘಿಸಿದ ಯಡಿಯೂರಪ್ಪ, ನೀವು ಸಭಾಪತಿಯಾಗಿ ಸದನ ನಡೆಸಿದ ರೀತಿ ಎಲ್ಲರೂ ಮೆಚ್ಚಬೇಕು. ಈ ಬಾರಿ ಚುನಾವಣೆಯಲ್ಲಿ ಮತ್ತೆ ಗೆದ್ದು ಸಚಿವರಾಗಿ ಆಯ್ಕೆಯಾಗಿ ಬರಬೇಕು ಎಂಬುದು ನಮ್ಮ ಆಶಯ ಎಂದರು. ಇನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಸದನದಲ್ಲಿಯೂ ಹಲವು ಉತ್ತಮ ಸಲಹೆ ಸೂಚನೆ ನೀಡಿದ್ದಾರೆ. ಎ.ಟಿ.ರಾಮಸ್ವಾಮಿ ಸೇರಿದಂತೆ ಹಲವರು ಉತ್ತಮ ಕೆಲಸ ಮಾಡಿದ್ದಾರೆ. ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದರು.

For Latest News Updates, Join Our Whatsapp Community🚩
RELATED ARTICLES

Most Popular