ಬುಧವಾರದಂದು ನಡೆದ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮೇಯರ್ ಆಗಿ ಆಮ್ ಆದ್ಮಿ ಪಕ್ಷದ ಶೆಲ್ಲಿ ಒಬೆರಾಯ್ ಹಾಗೂ ಉಪಮೇಯರ್ ಆಗಿ ಮಹಮ್ಮದ್ ಇಕ್ಬಾಲ್ ಆಯ್ಕೆಯಾಗಿದ್ದಾರೆ.
ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕಾಗಿ ಆಮ್ ಆದ್ಮಿ ಪಕ್ಷ ಹಾಗೂ ಬಿಜೆಪಿ ಸದಸ್ಯರ ನಡುವೆ ಈ ಮೊದಲಿನಿಂದಲೂ ಗದ್ದಲ ನಡೆದುಕೊಂಡು ಬಂದಿದ್ದು, ಆದರೆ ಸುಪ್ರೀಂ ಕೋರ್ಟ್ ನಾಮನಿರ್ದೇಶನಗೊಂಡ ಸದಸ್ಯರಿಗೆ ಮತದಾನದ ಹಕ್ಕು ನಿರಾಕರಿಸಿದ ಬಳಿಕ ವಿಜಯಮಾಲೆ ಆಮ್ ಆದ್ಮಿ ಪಕ್ಷದ ಪಾಲಿಗೆ ಒಲಿದಿದೆ.
ಆದರೆ ನಂತರ ವಿವಿಧ ಸಮಿತಿಗಳಿಗೆ ಆರು ಮಂದಿ ಸದಸ್ಯರುಗಳನ್ನು ನೇಮಕ ಮಾಡುವ ವಿಚಾರದಲ್ಲಿ ಮತ್ತೆ ಭಾರಿ ಗದ್ದಲ ನಡೆದಿದ್ದು, ಸದಸ್ಯರುಗಳು ಪರಸ್ಪರ ವಿರುದ್ಧ ಕೈಗೆ ಸಿಕ್ಕ ವಸ್ತುಗಳನ್ನೆಲ್ಲ ಬೀಸಿದ್ದಾರೆ.
ಮಧ್ಯರಾತ್ರಿವರೆಗೂ ಈ ಸಭೆ ನಡೆದಿದ್ದು, ಆದರೆ ಗಲಾಟೆ ಮಾಡಿ ಎಲ್ಲರಿಗೂ ಸುಸ್ತಾಗಿದ್ದರಿಂದ ಸದನದಲ್ಲಿಯೇ ಸ್ವಲ್ಪ ಹೊತ್ತು ನಿದ್ರೆಗೆ ಜಾರಿದ್ದಾರೆ. ಎಚ್ಚರವಾಗುತ್ತಿದ್ದಂತೆ ಮತ್ತೆ ಫೈಟ್ ಮುಂದುವರೆದಿದ್ದು, ಅಂತಿಮವಾಗಿ ಮೇಯರ್ ಶೆಲ್ಲಿ ಒಬೆರಾಯ್ ಸಭೆಯನ್ನು ಮುಂದೂಡಿದ್ದಾರೆ.