ನವದೆಹಲಿ: ದೆಹಲಿ ಮಹಾನಗರ ಪಾಲಿಕೆ ಕೌನ್ಸಿಲ್ ನಲ್ಲಿ ತಡರಾತ್ರಿ ಕೋಲಾಹಲ ನಡೆದು, ಸದಸ್ಯರು ಹೈಡ್ರಾಮಾ ನಡೆಸಿದ್ದಾರೆ.
ಆಮ್ ಆದ್ಮಿ ಪಕ್ಷ ಮತ್ತು ಬಿಜೆಪಿ ಸದಸ್ಯರ ನಡುವೆ ತಳ್ಳಾಟ, ನೂಕಾಟ ನಡೆದಿದೆ. ಒಬ್ಬರ ಮೇಲೊಬ್ಬರು ನೀರಿನ ಬಾಟಲಿ ತೂರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೆಹಲಿ ಮೇಯರ್ ಆಗಿ ಆಮ್ ಆದ್ಮಿ ಪಕ್ಷದ ಶೆಲ್ಲೊ ಒಬೆರಾಯ್, ಉಪಮೇಯರ್ ಆಗಿ ಆಲೆ ಮೊಹಮ್ಮದ್ ಆಯ್ಕೆಯಾಗಿದ್ದಾರೆ.
ಮೇಯರ್ ಮತ್ತು ಉಪಮೇಯರ್ ಆಯ್ಕೆ ಪ್ರಕ್ರಿಯೆ ನಂತರ ಮೊದಲ ಸಭೆ ನಡೆದಿದ್ದು, ಮೊದಲ ಸಭೆಯಲ್ಲಿ ಆಪ್ ಮತ್ತು ಬಿಜೆಪಿ ಸದಸ್ಯರ ನಡುವೆ ಘರ್ಷಣೆ ನಡೆದಿದೆ. ಸ್ಥಾಯಿ ಸಮಿತಿಗೆ ಅಧ್ಯಕ್ಷರ ನೇಮಕ ವೇಳೆ ಜಟಾಪಟಿ ನಡೆದಿದೆ. ಸದಸ್ಯರು ಪರಸ್ಪರ ಕೈ ಮಿಲಾಯಿಸಿಕೊಂಡಿದ್ದಾರೆ. ಆಮ್ ಆದ್ಮಿ ಪಕ್ಷ ಮತ್ತು ಬಿಜೆಪಿ ಸದಸ್ಯರ ಗಲಾಟೆ ಹಿನ್ನೆಲೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮುಂದೂಡಲಾಗಿದೆ.
ಗಲಾಟೆ ನಡುವೆ ಮಧ್ಯರಾತ್ರಿವರೆಗೂ ಸ್ಥಾಯಿ ಸಮಿತಿಯ ಚುನಾವಣೆ ಪ್ರಕ್ರಿಯೆ ನಡೆದಿದ್ದು, ಕೆಲವು ಬಿಜೆಪಿ ಸದಸ್ಯರು ತನ್ನ ಮೇಲೆ ದಾಳಿ ಮಾಡಿದ್ದಾರೆ ಎಂದು ಶೆಲ್ಲಿ ಆರೋಪಿಸಿದ್ದಾರೆ. ವಿರೋಧ ಪಕ್ಷವು ಆರೋಪ ನಿರಾಕರಿಸಿದೆ.