HomeLatest Newsಕೊಹ್ಲಿಯ ಮೇಣದ ಪ್ರತಿಮೆಗೆ ಲಿಪ್‌ ಕಿಸ್‌ ಕೊಟ್ಟ ಯುವತಿ: ಅಸಹ್ಯ ಎಂದ ನೆಟ್ಟಿಗರು

ಕೊಹ್ಲಿಯ ಮೇಣದ ಪ್ರತಿಮೆಗೆ ಲಿಪ್‌ ಕಿಸ್‌ ಕೊಟ್ಟ ಯುವತಿ: ಅಸಹ್ಯ ಎಂದ ನೆಟ್ಟಿಗರು

ಸಿನಿ ತಾರೆಯರು, ಕ್ರಿಕೆಟ್​ ತಾರೆಯರಂಥ ಸೆಲೆಬ್ರಿಟಿಗಳು ಎಂದರೆ ಕೆಲವರಿಗೆ ಇನ್ನಿಲ್ಲದ ಹುಚ್ಚು. ಇವರನ್ನೇ ದೇವರು ಎಂದು ಪೂಜಿಸುವವರೂ ಇದ್ದಾರೆ. ಅದರಲ್ಲಿಯೂ ಮಹಿಳೆಯರಿಗೆ ಈ ತಾರೆಯರ ಮೇಲೆ ಸ್ವಲ್ಪ ಹುಚ್ಚು ಹೆಚ್ಚೇ ಎಂದು ಹೇಳಬೇಕು. ತಮ್ಮ ನೆಚ್ಚಿನ ತಾರೆಗಾಗಿ ಇವರು ಏನು ಬೇಕಾದರೂ ಮಾಡಲು ರೆಡಿ ಇರುತ್ತಾರೆ. ಅಭಿಮಾನ ಅತಿರೇಕಕ್ಕೆ ಹೋಗಿರುವ ಹಲವಾರು ಉದಾಹರಣಗಳನ್ನು ಈಗಾಗಲೇ ನೋಡಿದ್ದೇವೆ.

ಇದೀಗ ಕ್ರಿಕೆಟ್​ ತಾರೆ ವಿರಾಟ್​ ಕೊಹ್ಲಿ ಅವರ ಅಭಿಮಾನಿಯೊಬ್ಬಳು ಕೊಹ್ಲಿ ಅವರ ಮೇಣದ ಪ್ರತಿಮೆಗೆ ಚುಂಬಿಸುತ್ತಿರುವ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದೆಹಲಿಯ ಮೇಡಮ್ ಟುಸ್ಸಾಡ್ಸ್ ಮೇಣದ ವಸ್ತುಸಂಗ್ರಹಾಲಯದಲ್ಲಿರುವ ವಿರಾಟ್ ಕೊಹ್ಲಿ ಮೇಣದ ಪ್ರತಿಮೆ ಇಡಲಾಗಿದೆ. ಇದಕ್ಕೆ ಯುವತಿಯೊಬ್ಬಳು ಮುತ್ತಿಡುತ್ತಿದ್ದಾಳೆ. ಆಕೆ ತನ್ನ ಕೈಯನ್ನು ಪ್ರತಿಮೆಯ ಕುತ್ತಿಗೆಯ ಸುತ್ತಲೂ ಹಾಕಿ ಸಾಕ್ಷಾತ್​ ವಿರಾಟ್​ ಕೊಹ್ಲಿಯೇ ತನ್ನ ಎದುರಿಗೆ ನಿಂತಿರುವಂತೆ ಭಾವಿಸಿ ಚುಂಬಿಸಿ ಖುಷಿ ಪಟ್ಟಿದ್ದಾಳೆ. ಇದರ ವಿಡಿಯೋಗೆ ಥರಹೇವಾರಿ ಕಮೆಂಟ್​ಗಳು ಸುರಿಮಳೆಯಾಗುತ್ತದೆ.

ಅಭಿಮಾನ ಅಭಿಮಾನವಾಗಿದ್ದರೆ ಚೆನ್ನ. ಈ ರೀತಿಯ ಹುಚ್ಚಾಟಗಳು ಏಕೆ ಎಂದು ಪ್ರಶ್ನಿಸುತ್ತಿದ್ದಾರೆ. ಈ ದೃಶ್ಯ ನೋಡುವ ಮೊದಲು ನಾನೇಕೆ ಸಾಯಲಿಲ್ಲ ಎಂದು ಒಬ್ಬ ಕಮೆಂಟಿಗ ತರ್ಲೆ ಕಮೆಂಟ್​ ಹಾಕಿದ್ದಾನೆ. ಇದು ಅಸಹ್ಯದ ಪರಮಾವಧಿ ಎಂದು ಹಲವರು ಕಮೆಂಟ್​ನಲ್ಲಿ ತಿಳಿಸುತ್ತಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular