ಸರೋಗಸಿ ಮೂಲಕ ಅಮ್ಮನಾಗಿರುವ ಪ್ರಿಯಾಂಕಾ ಚೋಪ್ರಾ ಈಗ ಸ್ವಲ್ಪ ಸಮಯ ಚಿತ್ರರಂಗದಿಂದ ದೂರವಿದ್ದರೂ, ಅವರು ಸುದ್ದಿಯಾಗುತ್ತಲೇ ಇದ್ದಾರೆ. ಇದೀಗ ಲಾಸ್ ವೇಗಾಸ್ನಲ್ಲಿ ನಡೆದ ಸಂಗೀತ ಕಛೇರಿಯಲ್ಲಿ ಇವರು ಪಾಲ್ಗೊಂಡಿದ್ದರು. ಅಲ್ಲಿ ಅವರಿಗೆ ವಿಐಪಿ ಸೀಟು ನೀಡಲಾಗಿತ್ತು.
ಆದರೆ ಪ್ರಿಯಾಂಕಾ ಅವರು ಕ್ಯಾನ್ಸರ್ ರೋಗಿಯಾದ ಅಭಿಮಾನಿಯ ತಾಯಿಯೊಬ್ಬರಿಗೆ ವಿಐಪಿ ಸೀಟ್ ಬಿಟ್ಟುಕೊಟ್ಟಿದ್ದು ಸುದ್ದಿಯಾಗಿದ್ದಾರೆ.
ಲೀಸಾ ಡಾನ್ ಎಂದು ಗುರುತಿಸಲಾದ ಅಭಿಮಾನಿ, ಈ ಕುರಿತು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ. ಕ್ಯಾನ್ಸರ್ ರೋಗಿಯಾದ ತನಗೆ ಮತ್ತು ತಾಯಿಗೆ ವಿಐಪಿ ಸೀಟ್‌ಗಳನ್ನು ಪ್ರಿಯಾಂಕಾ ಚೋಪ್ರಾ ಹೇಗೆ ನೀಡಿದರು ಎಂಬುದನ್ನು ಅವರು ಶೇರ್ ಮಾಡಿಕೊಂಡಿದ್ದಾರೆ.
ಸಂಗೀತ ಕಛೇರಿಯ ವಿಡಿಯೋದೊಂದಿಗೆ ಅವರು ಈ ವಿಷಯವನ್ನು ತಿಳಿಸಿದ್ದಾರೆ. ಸಂಗೀತ ಕಛೇರಿ ಅದ್ಭುತವಾಗಿರುತ್ತದೆ ಎಂದು ಹೋಗಿದ್ದೆ. ಆದರೆ ನಾನು ಅನಿರೀಕ್ಷಿತವಾಗಿ ಪ್ರಿಯಾಂಕಾ ಅವರನ್ನು ಭೇಟಿಯಾದೆ. ಅವರು ತಮ್ಮ ಸೀಟು ಬಿಟ್ಟುಕೊಟ್ಟರು. ಇದನ್ನು ನಾನು ಎಂದಿಗೂ ಮರೆಯಲಾರೆ ಎಂದಿದ್ದಾರೆ.
So, I knew the @jonasbrothers concert would be awesome. And it was. What I did not expect was that I would get to meet Priyanka Chopra Jonas and have a night I will never forget, and am so grateful for. So it’s STORY TIME. Thank you @priyankachopra! 💗 pic.twitter.com/VFUspo7G93
— x-lisa dawn (@itslisae) February 19, 2023

