KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

SHOCKING: ಅಮೆಜಾನ್‌, ಆಪಲ್‌ನಂತಹ ಪ್ರತಿಷ್ಠಿತ ಕಂಪನಿಗಳಿಗೆ ಹ್ಯಾಕರ್‌ಗಳ ಕಾಟ; ಡೇಟಾ ಸೆಂಟರ್‌ಗಳ ಲಾಗಿನ್ ಐಡಿ ವಿವರ ಕದ್ದು ಮಾರಾಟ….!

Published February 21, 2023 at 5:02 pm
Share
SHARE

ಹ್ಯಾಕರ್‌ಗಳು ವಿಶ್ವದ ಪ್ರಮುಖ ಕಂಪನಿಗಳ ಡೇಟಾ ಸೆಂಟರ್‌ಗಳ ಲಾಗಿನ್ ಪಾಸ್‌ವರ್ಡ್‌ಗಳನ್ನು ಮಾರಾಟ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ವರದಿಯ ಪ್ರಕಾರ ಹ್ಯಾಕರ್‌ಗಳು ಅಲಿಬಾಬಾ, ಅಮೆಜಾನ್, ಆಪಲ್, ಬಿಎಂಡಬ್ಲ್ಯು ಎಜಿ, ಮೈಕ್ರೋಸಾಫ್ಟ್ ಮತ್ತು ವಾಲ್‌ಮಾರ್ಟ್‌ನಂತಹ ಕಂಪನಿಗಳ ಡೇಟಾ ಸೆಂಟರ್‌ಗಳ ಲಾಗಿನ್ ಪಾಸ್‌ವರ್ಡ್‌ಗಳಿಗೆ ಸಂಬಂಧಿಸಿದ ಡೇಟಾವನ್ನು ಹ್ಯಾಕ್‌ ಮಾಡುತ್ತಿದ್ದಾರೆ.

ಭಾರತಿ ಏರ್‌ಟೆಲ್ ಮತ್ತು ನ್ಯಾಷನಲ್ ಇಂಟರ್‌ನೆಟ್ ಎಕ್ಸ್‌ಚೇಂಜ್ ಆಫ್ ಇಂಡಿಯಾ ಸೇರಿದಂತೆ ಭಾರತೀಯ ಕಂಪನಿಗಳ ರಹಸ್ಯ ಕೂಡ ಹ್ಯಾಕರ್‌ಗಳ ಕೈಸೇರುತ್ತಿದೆ.  ಅಮೆರಿಕದ ಸೈಬರ್ ಭದ್ರತಾ ಸಂಶೋಧನಾ ಸಂಸ್ಥೆ Resecurity Inc ಈ ಹ್ಯಾಕರ್‌ಗಳು ಏಷ್ಯಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಎರಡು ದೊಡ್ಡ ಡೇಟಾ ಸೆಂಟರ್‌ಗಳ ಲಾಗಿನ್ ಡೇಟಾಕ್ಕೆ ಕೈ ಹಾಕಿದ್ದಾರೆ ಎಂದು ಬಹಿರಂಗಪಡಿಸಿದೆ. ಇದರಲ್ಲಿ ಶಾಂಘೈ ಮೂಲದ GDS ಹೋಲ್ಡಿಂಗ್ಸ್ ಲಿಮಿಟೆಡ್ ಮತ್ತು ಸಿಂಗಾಪುರ ಮೂಲದ ST ಟೆಲಿಮೀಡಿಯಾ ಜಾಗತಿಕ ಡೇಟಾ ಕೇಂದ್ರಗಳಿವೆ.

ಜಿಡಿಎಸ್ ಹೋಲ್ಡಿಂಗ್ ಮತ್ತು ಎಸ್‌ಟಿ ಟೆಲಿಮೀಡಿಯಾದ 2000 ಗ್ರಾಹಕರು ಇದರಿಂದ ತೊಂದರೆಗೀಡಾಗಿದ್ದಾರೆ.ಅಲಿಬಾಬಾ ಗ್ರೂಪ್ ಹೋಲ್ಡಿಂಗ್, ಅಮೇಜಾನ್‌ ಡಾಟ್‌ ಕಾಮ್‌, ಆಪಲ್‌, BMW AG, Goldman Sachs Group, Huawei Technologies, ಮೈಕ್ರೋಸಾಫ್ಟ್‌, ವಾಲ್‌ಮಾರ್ಟ್‌, ಭಾರತಿ ಏರ್ಟೆಲ್‌, ಬ್ಲೂಮ್‌ಬರ್ಗ್‌, ಫೋರ್ಡ್‌ ಮೋಟರ್ಸ್‌, ಮಾಸ್ಟರ್‌ ಕಾರ್ಡ್‌, ಮೊರ್ಗನ್‌ ಸ್ಟ್ಯಾನ್ಲಿ, ಹೋಲ್ಡಿಂಗ್ಸ್‌ ಇನ್‌ಕಾರ್ಪೊರೇಟೆಡ್‌ ಸೇರಿದಂತೆ ಅನೇಕ ಕಂಪನಿಗಳ ಡೇಟಾ ಸೋರಿಕೆಯಾಗಿದೆ. ಹ್ಯಾಕರ್‌ಗಳು ಐದು ಕಂಪನಿಗಳ ಖಾತೆಗಳಿಗೆ ಲಾಗ್ ಇನ್ ಮಾಡಿದ್ದಾರೆ.

ST ಟೆಲಿಮೀಡಿಯಾದಲ್ಲಿ, ಹ್ಯಾಕರ್‌ಗಳು ನ್ಯಾಷನಲ್ ಇಂಟರ್ನೆಟ್ ಎಕ್ಸ್‌ಚೇಂಜ್ ಆಫ್ ಇಂಡಿಯಾದ ಖಾತೆಯನ್ನು ಪ್ರವೇಶಿಸಿದ್ದಾರೆ, ಇದು ಭಾರತದಲ್ಲಿನ ಇಂಟರ್ನೆಟ್ ಕಂಪನಿಗಳನ್ನು ಪರಸ್ಪರ ಸಂಪರ್ಕಿಸುವ ಸಂಸ್ಥೆಯಾಗಿದೆ.  ಲಾಗಿನ್ ವಿವರಗಳು ಒಂದು ವರ್ಷದಿಂದ ಹ್ಯಾಕರ್‌ಗಳ ಬಳಿ ಲಭ್ಯವಿದ್ದು, ಕಳೆದ ತಿಂಗಳು  1,75,000 ಡಾಲರ್‌ಗೆ ಮಾರಾಟ ಮಾಡಲು ಡಾರ್ಕ್ ವೆಬ್‌ನಲ್ಲಿ ಹಾಕಿದ್ದರು.

ಹ್ಯಾಕರ್‌ಗಳು ಕೆಲವು ಕಂಪನಿಗಳನ್ನು ಟಾರ್ಗೆಟ್ ಮಾಡಿದ್ದಾರೆ. ಕಂಪನಿಗಳ ಸಂಖ್ಯೆ 2000 ಕ್ಕಿಂತ ಹೆಚ್ಚಿದೆ. ಜನವರಿ ತಿಂಗಳಲ್ಲಿ ಜಿಡಿಎಸ್ ಹೋಲ್ಡಿಂಗ್ ಮತ್ತು ಎಸ್‌ಟಿ ಟೆಲಿಮೀಡಿಯಾ ಗ್ರಾಹಕರ ಪಾಸ್‌ವರ್ಡ್‌ಗಳನ್ನು ಬದಲಾಯಿಸಿದ್ದವು. GDS ಹೋಲ್ಡಿಂಗ್ ತನ್ನ ಸಿಸ್ಟಮ್‌ಗಳನ್ನು ಉಲ್ಲಂಘಿಸುವ ಪ್ರಯತ್ನ ನಡೆದಿದೆ ಎಂದು ಒಪ್ಪಿಕೊಂಡಿತು. ಆದಾಗ್ಯೂ ಗ್ರಾಹಕರ ಐಟಿ ವ್ಯವಸ್ಥೆಗಳು ಅಥವಾ ಡೇಟಾಗೆ ಯಾವುದೇ ಅಪಾಯವಾಗಿಲ್ಲ ಎಂದು ಹೇಳಿದೆ.

You Might Also Like

ಬೃಹತ್ ಡ್ರೋನ್ ದಾಳಿ ನಡೆಸಿ ರಷ್ಯಾದ 2 ವಾಯುನೆಲೆ, 40ಕ್ಕೂ ಹೆಚ್ಚು ಮಿಲಿಟರಿ ವಿಮಾನ ನಾಶಪಡಿಸಿದ ಉಕ್ರೇನ್ | WATCH VIDEO

ʼಆಧಾರ್ʼ ನವೀಕರಣಕ್ಕೆ ಅವಕಾಶ: ಜೂನ್ 14 ರೊಳಗೆ ಮಾಡದಿದ್ದರೆ ತೆರಬೇಕಾಗುತ್ತದೆ ಶುಲ್ಕ !

‘ಫಿಟ್ ಇಂಡಿಯಾ’ ಕಾರ್ಯಕ್ರಮ ಅಡಿಯಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಸೈಕಲ್ ಜಾಥಾ

ಜಿನ್‌ಪಿಂಗ್ ಮಗಳ ರಹಸ್ಯ ವ್ಯಾಸಂಗ ; ಅಮೆರಿಕ ವೀಸಾ ನಿರ್ಬಂಧಗಳ ನಡುವೆ ಮತ್ತೆ ಮುನ್ನೆಲೆಗೆ !

ಹಾಲು ಬಳಸುವ ಮುನ್ನ ಗಮನಿಸಿ, ಬೆಳ್ಳಗಿರೋದೆಲ್ಲ ಹಾಲಲ್ಲ…! ಕೆಮಿಕಲ್ ಮಿಶ್ರಿತ ಹಾಲು ತಯಾರಿಕಾ ಘಟಕದ ಮೇಲೆ ದಾಳಿ

TAGGED:ಮಾರಾಟsellಕಳವುಹ್ಯಾಕರ್ಸ್Hackersಡೇಟಾ ಸೆಂಟರ್‌ಲಾಗಿನ್‌ ಐಡಿdata centers login credentialsbig firms
Share This Article
Facebook Copy Link Print

Latest News

ಬೃಹತ್ ಡ್ರೋನ್ ದಾಳಿ ನಡೆಸಿ ರಷ್ಯಾದ 2 ವಾಯುನೆಲೆ, 40ಕ್ಕೂ ಹೆಚ್ಚು ಮಿಲಿಟರಿ ವಿಮಾನ ನಾಶಪಡಿಸಿದ ಉಕ್ರೇನ್ | WATCH VIDEO
ʼಆಧಾರ್ʼ ನವೀಕರಣಕ್ಕೆ ಅವಕಾಶ: ಜೂನ್ 14 ರೊಳಗೆ ಮಾಡದಿದ್ದರೆ ತೆರಬೇಕಾಗುತ್ತದೆ ಶುಲ್ಕ !
‘ಫಿಟ್ ಇಂಡಿಯಾ’ ಕಾರ್ಯಕ್ರಮ ಅಡಿಯಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಸೈಕಲ್ ಜಾಥಾ
ಜಿನ್‌ಪಿಂಗ್ ಮಗಳ ರಹಸ್ಯ ವ್ಯಾಸಂಗ ; ಅಮೆರಿಕ ವೀಸಾ ನಿರ್ಬಂಧಗಳ ನಡುವೆ ಮತ್ತೆ ಮುನ್ನೆಲೆಗೆ !

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

ಬಿಪಿಎಲ್ ಕಾರ್ಡ್ ದಾರರಿಗೆ ಗುಡ್ ನ್ಯೂಸ್: ಮೂರು ತಿಂಗಳ ಪಡಿತರ ಮುಂಗಡ ವಿತರಣೆಗೆ ಆದೇಶ
BREAKING : ಭಾರತ-ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ:  ‘IPL’ ಕ್ರಿಕೆಟ್ ಟೂರ್ನಿ ರದ್ದುಗೊಳಿಸಿ ‘BCCI’ ಆದೇಶ
BIG NEWS: ಮಗಳ ಹತ್ಯೆಗೆ ಪ್ರತಿಕಾರ: ಆರೋಪಿಯ ತಂದೆಯನ್ನೇ ಬರ್ಬರವಾಗಿ ಕೊಲೆಗೈದ ಅಪ್ಪ!
BREAKING : ‘ಮಡೆನೂರು ಮನು’ ಬೆನ್ನಲ್ಲೇ ಹಾಸ್ಯನಟ ಅಪ್ಪಣ್ಣ ವಿರುದ್ಧ ಗಂಭೀರ ಆರೋಪ ಮಾಡಿದ ಸಂತ್ರಸ್ತೆ.!

Automotive

ಹೆಲ್ಮೆಟ್ ಇಲ್ಲದೆ ಕೈ ಬಿಟ್ಟು ಸ್ಕೂಟರ್ ಸವಾರಿ: ಯುವತಿ ಅಪಾಯಕಾರಿ ಸಾಹಸ ವೈರಲ್ | Watch Video
ಈ ಯೋಜನೆ ಮೂಲಕ ಕೇವಲ 13,000 ರೂ. ಗೆ ಎಲೆಕ್ಟ್ರಿಕ್ ಸ್ಕೂಟರ್ ನಿಮ್ಮದಾಗಿಸಿಕೊಳ್ಳಿ !
ರೋಡ್‌ ಟ್ರಿಪ್: ಕೇವಲ ಪ್ರಯಾಣವಲ್ಲ, ಅದೊಂದು ಅನುಭವ‌ !

Entertainment

BREAKING NEWS: ನಾನೇನು ಕಮಲ್ ಹಾಸನ್ ಹೇಳಿಕೆ ಸಮರ್ಥಿಸಿಕೊಂಡಿಲ್ಲ: ಶಿವರಾಜ್ ಕುಮಾರ್
ಏ.24 ರಂದು ವರನಟ ಡಾ.ರಾಜ್ ಕುಮಾರ್ ಜನ್ಮದಿನಾಚರಣೆ : ಕನ್ನಡ ಚಲನಚಿತ್ರ ಗೀತೆಗಳ ಗಾಯನ ಕಾರ್ಯಕ್ರಮ.!
ದೇಶ ವಿರೋಧಿ ಹೇಳಿಕೆ: ಕಿರುತೆರೆ ಖ್ಯಾತ ನಟ ಅಖಿಲ್ ವಿರುದ್ಧ ಪ್ರಕರಣ ದಾಖಲು

Sports

IPL 2025 ಕ್ವಾಲಿಫೈಯರ್ 2: MI vs PBKS – ಫೈನಲ್‌ಗೇರಲು ಇಂದು ಮಹಾ ಕದನ !
“ನಾನು ಹಿನ್ನಾಯ, ನೀವು ಯಾಕೆ ನಿವೃತ್ತಿ ತೆಗೆದುಕೊಂಡಿರಿ?” – ಹರ್ಭಜನ್ ಪುತ್ರಿಯಿಂದ ಕೊಹ್ಲಿಗೆ ಭಾವನಾತ್ಮಕ ಸಂದೇಶ !
“ಇವರು ಯಾರು ?” – ಕ್ವಾಲಿಫೈಯರ್‌ನಲ್ಲಿ ಹೊಸ ಮುಖ ಕಂಡು ವಿರಾಟ್ ಕೊಹ್ಲಿ ಅಚ್ಚರಿ !

Special

ನಿಮಗೂ ತಿಳಿದಿರಲಿ ʼಹಳದಿʼ ಬಣ್ಣದ ಮಹತ್ವ
ಜಿರಳೆ ಕಾಟದಿಂದ ಮುಕ್ತಿ: ಇಲ್ಲಿವೆ ಮನೆಮದ್ದುಗಳು ಮತ್ತು ಪರಿಣಾಮಕಾರಿ ವಿಧಾನಗಳು….!
ಭಾರತದ ಮೊದಲ ʼಟೆಸ್ಟ್ ಟ್ಯೂಬ್ ಬೇಬಿʼ ಕುರಿತು ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ !

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?