HomeInternationalಗೆಳೆಯನನ್ನು ತ್ಯಜಿಸಿ ಅಪ್ಪನ ವಯಸ್ಸಿನವನನ್ನು ಮದುವೆಯಾದ ಯುವತಿ....!

ಗೆಳೆಯನನ್ನು ತ್ಯಜಿಸಿ ಅಪ್ಪನ ವಯಸ್ಸಿನವನನ್ನು ಮದುವೆಯಾದ ಯುವತಿ….!

ಪ್ರೀತಿಗೆ ಯಾವುದೇ ಗಡಿಗಳಿಲ್ಲ. ಇದು 24 ವರ್ಷದ ಈ ಹುಡುಗಿಯ ವಿಷಯದಲ್ಲಿ ನಿಜವಾಗಿದೆ. ಈ ಹುಡುಗಿ ತನ್ನ ಅಪ್ಪನ ವಯಸ್ಸಿನ ವ್ಯಕ್ತಿಯ ಜೊತೆಗೆ ಮದುವೆಯಾಗಲು ತನ್ನ ಗೆಳೆಯನೊಂದಿಗಿನ ಮದುವೆಯನ್ನು ರದ್ದುಗೊಳಿಸಿ ಸುದ್ದಿಯಾಗಿದ್ದಾಳೆ.

ಅಮೆರಿಕದ ಉತ್ತರ ಕೆರೊಲಿನಾದ 24 ವರ್ಷದ ಅಮಂಡಾ ಕ್ಯಾನನ್ ಎಂಬಾಕೆ ಕಾಲೇಜಿನಿಂದಲೂ ಹುಡುಗನೊಬ್ಬನನ್ನು ಪ್ರೀತಿಸುತ್ತಿದ್ದಳು. ನಂತರ 2017 ರಲ್ಲಿ ಏಸ್ ಎಂಬ 54 ವರ್ಷದ ವ್ಯಕ್ತಿಯನ್ನು ಭೇಟಿಯಾದಳು. ಅತ್ತ ಏಸ್​ ಡಿವೋರ್ಸ್​ ಪಡೆದಿದ್ದ. ಇದಾದ ಮೇಲೆ ಮತ್ತೆ ಮದುವೆಯಾಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದ.

ಆದರೆ ಆತ ಅಮಂಡಾಳನ್ನು ಭೇಟಿಯಾದ ನಂತರ ತನ್ನ ಪ್ರತಿಜ್ಞೆಯನ್ನು ಮುರಿದ. ಆಕೆಯ ಸೌಂದರ್ಯಕ್ಕೆ ಮನಸೋತ. ಇತ್ತ ಯುವತಿಯೂ ಆತನಿಗೆ ಒಲಿದಳು. ಬಾಯ್​ಫ್ರೆಂಡ್​ ಜೊತೆ ಸಂಬಂಧ ಮುರಿದಳು. 4 ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ ನಂತರ ಮದುವೆಯಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಡೈಲಿ ಸ್ಟಾರ್ ವರದಿಯ ಪ್ರಕಾರ, ಏಸ್ ತನ್ನ ಹಿಂದಿನ ಮದುವೆಯಿಂದ ಇಬ್ಬರು ಮಕ್ಕಳಾದ ಪೇಟನ್ (21) ಮತ್ತು ಕೇಡ್ (20) ಎಂಬ ಮಕ್ಕಳಿಗೆ ತಂದೆಯಾಗಿದ್ದಾನೆ. ಆದರೆ ಇದರಿಂದ ನನಗೆ ಸಮಸ್ಯೆ ಇಲ್ಲ ಎಂದು ಯುವತಿ ಹೇಳಿದ್ದಾಳೆ. ಏಸ್​ದು ನನ್ನ ಅಪ್ಪನ ವಯಸ್ಸು. ಆದರೂ ನನಗೆ ಸಮಸ್ಯೆ ಇಲ್ಲ ಎಂದಿದ್ದಾಳೆ.

 

For Latest News Updates, Join Our Whatsapp Community🚩
RELATED ARTICLES

Most Popular