HomeCrimeಆಕಸ್ಮಿಕವಾಗಿ ಅಜ್ಜಿಯನ್ನೇ ಶೂಟ್‌ ಮಾಡಿದ 6 ವರ್ಷದ ಬಾಲಕಿ; ಅಮೆರಿಕಾದಲ್ಲೊಂದು ದಾರುಣ ಘಟನೆ

ಆಕಸ್ಮಿಕವಾಗಿ ಅಜ್ಜಿಯನ್ನೇ ಶೂಟ್‌ ಮಾಡಿದ 6 ವರ್ಷದ ಬಾಲಕಿ; ಅಮೆರಿಕಾದಲ್ಲೊಂದು ದಾರುಣ ಘಟನೆ

ಆಕಸ್ಮಿಕವಾಗಿ ಆರು ವರ್ಷದ ಬಾಲಕಿ ತನ್ನ ಅಜ್ಜಿಯನ್ನು ಚಲಿಸುವ ಕಾರ್ ನಲ್ಲಿ ಶೂಟ್ ಮಾಡಿದ್ದಾಳೆ. ಫಾಕ್ಸ್ ನ್ಯೂಸ್‌ನ ವರದಿಯ ಪ್ರಕಾರ, ಫೆಬ್ರವರಿ 16 ರಂದು ಅಮೆರಿಕಾದ ಫ್ಲೋರಿಡಾದಲ್ಲಿ ಈ ಘಟನೆ ನಡೆದಿದೆ.

ನಾರ್ಥ್ ಪೋರ್ಟ್ ಪೊಲೀಸ್ ಇಲಾಖೆಯ ಪತ್ರಿಕಾ ಪ್ರಕಟಣೆಯ ಪ್ರಕಾರ, ಬಾಲಕಿ ತನ್ನ 57 ವರ್ಷದ ಅಜ್ಜಿಯ ಗನ್ ಅನ್ನು ಕಾರಿನ ಹಿಂದಿನ ಸೀಟಿನಲ್ಲಿ ನೋಡಿದ್ದಾಳೆ. ನಂತರ ಅಜ್ಜಿಯ ಬೆನ್ನಿನ ಕೆಳಭಾಗಕ್ಕೆ ಬಾಲಕಿ ಆಕಸ್ಮಿಕವಾಗಿ ಗುಂಡು ಹಾರಿಸಿದ್ದಾಳೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದಾಗ್ಯೂ, ಮಹಿಳೆಯು ಕಾರನ್ನು ಮನೆಗೆ ಚಾಲನೆ ಮಾಡಿಕೊಂಡು ಹೋಗಿದ್ದು ತುರ್ತು ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದ್ದಾರೆ.

ಬಳಿಕ ಗಾಯಗೊಂಡಿದ್ದ ಆಕೆಯನ್ನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಂಡಿನ ದಾಳಿಯನ್ನ ಆಕಸ್ಮಿಕ ಎಂದು ಹೇಳಿರುವ ಪೊಲೀಸರು, ಘಟನೆಯು ಬಂದೂಕು ಸುರಕ್ಷತೆಯ ಪ್ರಾಮುಖ್ಯತೆಗೆ ದುರದೃಷ್ಟಕರ ಉದಾಹರಣೆಯಾಗಿದೆ ಎಂದಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular