ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಬಣಕ್ಕೆ ಶಿವಸೇನೆ ಪಕ್ಷದ ಚಿಹ್ನೆಯನ್ನು ನೀಡಲಾಗಿದೆ. ಶಿವಸೇನೆ ಪಕ್ಷದ ಚಿಹ್ನೆಗಾಗಿ ಉದ್ಧವ್ ಠಾಕ್ರೆ ಮತ್ತು ಏಕನಾಥ ಶಿಂದೆ ಬಣದ ನಡುವೆ ಪೈಪೋಟಿ ಏರ್ಪಟ್ಟಿತ್ತು.
ಉದ್ಧವ್ ಠಾಕ್ರೆ ಬಣಕ್ಕೆ ಭಾರಿ ಮುಖಭಂಗವಾಗಿದೆ. ಏಕನಾಥ ಶಿಂದೆ ಬಣಕ್ಕೆ ಶಿವಸೇನದ ಪಕ್ಷದ ಚಿಹ್ನೆ ಸಿಕ್ಕಿದೆ. ಚುನಾವಣಾ ಆಯೋಗ ಬಿಲ್ಲು ಮತ್ತು ಮತ್ತು ಬಾಣದ ಚಿಹ್ನೆಯನ್ನು ಶಿಂದೆ ಬಣಕ್ಕೆ ನೀಡಿದೆ. ಶಿವಸೇನೆ ಪಕ್ಷದ ಹೆಸರು, ಬಿಲ್ಲು ಮತ್ತು ಬಾಣದ ಚಿಹ್ನೆಯನ್ನು ಏಕನಾಥ್ ಶಿಂಧೆ ಬಣ ಉಳಿಸಿಕೊಳ್ಳಲಿದೆ ಆಯೋಗ ಹೇಳಿದೆ.
ಶಿವಸೇನೆ ಚಿಹ್ನೆ ಸಂಬಂಧ ಕಾನೂನು ಹೋರಾಟದಲ್ಲಿ ಮಹಾರಾಷ್ಟ್ರದ ಹಾಲಿ ಮುಖ್ಯಮಂತ್ರಿ ಏಕನಾಥ ಶಿಂದೆ ಬಣಕ್ಕೆ ಜಯ ಸಿಕ್ಕಿದೆ. ಏಕನಾಥ ಶಿಂದೆ ಬಂಡಾಯದಿಂದ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ಪತನವಾಗಿತ್ತು. ಇದೀಗ ಪಕ್ಷದ ಚಿಹ್ನೆಯನ್ನು ಕೂಡ ಠಾಕ್ರೆ ಕಳೆದುಕೊಂಡಿದ್ದಾರೆ.
'Shiv Sena' party name, 'Bow and Arrow' symbol to be retained by Eknath Shinde faction: ECI
Read @ANI Story | https://t.co/Lobu6t0kCv#EknathShinde #Shivsena #BowandArrow #Maharashtra #ECI #UddhavThackeray pic.twitter.com/SmaDZWonIm
— ANI Digital (@ani_digital) February 17, 2023


