
ವೈರಲ್ ಆಗಿರುವ ವಿಡಿಯೋದಲ್ಲಿ, ನಟಿ ದೀಪಿಕಾ ಪಡುಕೋಣೆ ಎಕಾನಮಿ ಕ್ಲಾಸ್ ವಿಮಾನದಲ್ಲಿ ಪ್ರಯಾಣ ಮಾಡುತ್ತಿರುವುದು ಕಂಡುಬಂದಿದೆ. ಆರೆಂಜ್ ಶಿಫ್ಟ್‌ನಲ್ಲಿ ಕೂಲಾಗಿ ಕಂಡ ದೀಪಿಕಾ ಪಡುಕೋಣೆಯನ್ನ ನೋಡಿದ ಪ್ರಯಾಣಿಕರು ಬೆರಗಾಗಿದ್ದಾರೆ.
ನಟಿಯನ್ನು ನೋಡಿ ಅಭಿಮಾನಿಯೊಬ್ಬರು “ಹಾಯ್ ದೀಪಿಕಾ” ಎಂದು ಹೇಳುವುದನ್ನು ವಿಡಿಯೋದಲ್ಲಿ ಕೇಳಬಹುದು. ಆದರೆ ಅದನ್ನು ನಟಿ ದೀಪಿಕಾ ಪಡುಕೋಣೆ ನಿರ್ಲಕ್ಷಿಸಿದಂತೆ ಕಾಣುತ್ತಾರೆ.
ಟ್ವಿಟರ್ ನಲ್ಲಿ ವೀಡಿಯೋ ಶೇರ್ ಮಾಡಿಕೊಂಡಿರುವ ಅಭಿಮಾನಿಯೊಬ್ಬರು “ಅಭಿಮಾನಿ, ದೀಪಿಕಾ ಪಡುಕೋಣೆ ಎಕಾನಮಿ ಕ್ಲಾಸ್‌ನಲ್ಲಿ ಪ್ರಯಾಣಿಸುತ್ತಿರುವುದನ್ನು ಸೆರೆಹಿಡಿದಿದ್ದಾರೆ, ಹೆಚ್ಚಿನ ತಾರೆಯರು ಇದೇ ರೀತಿ ಇರಬೇಕೆಂದು ಎಂದು ನೀವು ಭಾವಿಸುತ್ತೀರಾ?” ಎಂದು ಕೇಳಿದ್ದಾರೆ.
ಬಾಲಿವುಡ್ ನಟರು ಎಕಾನಮಿ ಕ್ಲಾಸ್‌ನಲ್ಲಿ ಪ್ರಯಾಣಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ, ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರು ಎಕಾನಮಿ ಕ್ಲಾಸ್‌ನಲ್ಲಿ ಪ್ರಯಾಣಿಸುತ್ತಿದ್ದ ವಿಡಿಯೋ ವೈರಲ್ ಆದ ನಂತರ ಇಂಟರ್ನೆಟ್‌ನಲ್ಲಿ ಭಾರೀ ಸದ್ದು ಮಾಡಿತ್ತು.
Fan captures Deepika Padukone Traveling In Economy Class
Do you think more stars should travel Economy?#DeepikaPadukone #pathan #fighter #hrithikroshan #bollywoodstars #bollywood #bollywoodnews #followforfollowback #news #india #ranveersingh pic.twitter.com/qayHGFCOee— Six Sigma Films (@sixsigmafilms) February 16, 2023

