HomeKarnatakaBIG NEWS: ಸಿದ್ದರಾಮಯ್ಯ ಟಗರಾ ತಲೆ ತೆಗೆಯಲು....? ಸಚಿವ ಅಶ್ವತ್ಥನಾರಾಯಣ ವಿರುದ್ಧ ಡಿ.ಕೆ.ಶಿವಕುಮಾರ್ ವಾಗ್ದಾಳಿ

BIG NEWS: ಸಿದ್ದರಾಮಯ್ಯ ಟಗರಾ ತಲೆ ತೆಗೆಯಲು….? ಸಚಿವ ಅಶ್ವತ್ಥನಾರಾಯಣ ವಿರುದ್ಧ ಡಿ.ಕೆ.ಶಿವಕುಮಾರ್ ವಾಗ್ದಾಳಿ

ಬೆಂಗಳೂರು: ಟಿಪ್ಪು ಹೊಡೆದಂತೆ ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಬೇಕು ಎಂಬ ಸಚಿವ ಅಶ್ವತ್ಥನಾರಾಯಣ ಅವರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಏನ್ ಟಗರಾ? ತಲೆ ತೆಗೆಯಲು? ಏನು ನಾಟಕ ನೋಡಿಕೊಂಡು ಬಂದ್ರಾ? ಎಂದು ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾದಿದ ಡಿ.ಕೆ.ಶಿವಕುಮಾರ್, ಯಾವ ಇತಿಹಾಸ ಹೇಳುತ್ತೆ ಇದನ್ನೆಲ್ಲ? ಅಶ್ವತ್ಥನಾರಾಯಣ ಗೆ ನಾನು ಉತ್ತರ ಕೊಡಲ್ಲ, ಸಿಎಂ ಬೊಮ್ಮಾಯಿ ಮತ್ತು ಯಡಿಯೂರಪ್ಪ ಉತ್ತರ ಕೊಡಲಿ ಎಂದು ಹೇಳಿದರು.

ಆ ಬಚ್ಚಲು ವಿಚಾರ ಹೇಳಿ ನನ್ನ ಬಾಯಿ ಬಚ್ಚಲು ಮಾಡಿಕೊಳ್ಳಲ್ಲ. ಜನ ನಿರ್ಧಾರ ಮಾಡಲಿ ನಾನೇಕೆ ಅವರ ಬಗ್ಗೆ ಸರ್ಟಿಫಿಕೇಟ್ ಕೊಡಲಿ ಎಂದು ಕಿಡಿಕಾರಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular