
ಒಂದು ವಾರದ ಪ್ರೇಮದ ಆಚರಣೆಗೆ ಕೊನೆಗೂ ತೆರೆ ಬಿದ್ದಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ತಾವು ಪ್ರೀತಿಯನ್ನು ಆಚರಿಸಿರುವ ರೀತಿಯ ಹಲವಾರು ವಿಡಿಯೋಗಳನ್ನು ಶೇರ್ ಮಾಡಿಕೊಂಡಿದ್ದರೆ, ಇನ್ನು ಕೆಲವರು ಬೇರೆಯವರ ಕುತೂಹಲದ ವಿಡಿಯೋಗಳನ್ನು ಶೇರ್ ಮಾಡಿದ್ದಾರೆ. ಈಗ ಇಲ್ಲೊಂದು ಅಪರೂಪದ ಪ್ರೇಮಿಗಳ ದಿನದ ವಿಡಿಯೋ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ಹುಲ್ಲಿನ ಮೈದಾನದಲ್ಲಿ ಕೆಲಸ ಮಾಡುವ ಕಾರ್ಮಿಕರ ಗುಂಪನ್ನು ನೋಡಬಹುದು. ಇಲ್ಲಿ ನಡೆದ ಪ್ರೇಮಿಗಳ ದಿನದ ಕುತೂಹಲದ ಘಟನೆಯೊಂದನ್ನು ಸೆರೆ ಹಿಡಿಯಲಾಗಿದೆ.
ಕೆಲಸಗಾರರ ನಡುವೆ ವಯಸ್ಸಾದ ಮಹಿಳೆಯೊಬ್ಬರು ನೆಲವನ್ನು ಅಗೆಯುವ ಕೆಲಸ ಬಿಟ್ಟು ಕೊಡಲಿಯನ್ನು ಎಸೆಯುತ್ತಾರೆ. ನಂತರ ಅಲ್ಲಿಯೇ ಇರುವ ಪತಿಗೆ ಹೂವೊಂದನ್ನು ಕೊಟ್ಟು ಐ ವಲ್ ಯೂ ಎನ್ನುತ್ತಾರೆ. ಆಕೆಯ ಪತಿ ಅಲ್ಲಿಯೇ ಹೊಲದಲ್ಲಿ ಕುಳಿತಿರುತ್ತಾರೆ.
ಈ ರೀತಿ ಮಾಡುವಂತೆ ಮಹಿಳೆಗೆ ಹೇಳಿ ಮಾಡಿಸಿದ್ದು ಎನ್ನುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಗೊತ್ತಾಗುತ್ತದೆ. ಏಕೆಂದರೆ ಆಕೆ ನಾಟಕೀಯವಾಗಿ ಪತಿಗೆ ಐ ಲವ್ ಯು ಎಂದಿದ್ದಾರೆ. ಪತಿ ಮಾತ್ರ ಪತ್ನಿಯ ಮಾತು ಕೇಳಿ ನಾಚಿಕೊಳ್ಳುವುದನ್ನು ನೋಡಬಹುದು. ವಿಡಿಯೋ ಮಾಡಿಸಿದ್ದೇ ಆದರೂ ಇದು ನೆಟ್ಟಿಗರ ಹೃದಯವನ್ನು ಗೆದ್ದಿದೆ. ಈ ದಂಪತಿಗೆ ಹಲವರು ಶುಭ ಹಾರೈಸಿದ್ದಾರೆ.
https://www.youtube.com/watch?v=3bfPFU9UL54&feature=youtu.be