
ಬಾಗಲಕೋಟೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ನನ್ನನ್ನು ಹೊಡೆದು ಹಾಕಿ ಎಂದು ಸಚಿವರೊಬ್ಬರು ಕರೆ ನೀಡಿದ್ದಾರೆ. ಇವರೆಲ್ಲ ಮನುಷ್ಯರೋ? ರಾಕ್ಷಸರೋ? ಹೊಡೆದು ಹಾಕಲು ನೀವೆಲ್ಲರೂ ಬಿಡುತ್ತೀರೆ? ಎಂದು ಜನರನ್ನು ಪ್ರಶ್ನಿಸಿದ್ದಾರೆ.
ನಾನು ಟಿಪ್ಪು, ರಾಯಣ್ಣ, ಬಸವಣ್ಣ, ಸೇವಾಲಾಲ್, ಕಿತ್ತೂರು ರಾಣಿ ಚೆನ್ನಮ್ಮ ಎಲ್ಲರನ್ನೂ ಗೌರವಿಸುತ್ತೇನೆ. ಸರ್ಕಾರಿ ಕಚೇರಿಗಳನ್ನು ಬಸವಣ್ಣನವರ ಫೋಟೋ ಅಳವಡಿಸಬೇಕು ಎಂದು ಜಾರಿಗೆ ತಂದಿದ್ದೇ ನಾನು. ಹೀಗಿರುವಾಗ ಇವರಿಂದ ನಾನು ಪಾಠ ಕಲಿಯಬೇಕೇ? ಎಂದು ಗುಡುಗಿದ್ದಾರೆ.

