HomeKarnatakaBIG NEWS: 'ಏರ್ ಶೋ' ವೀಕ್ಷಿಸಲು ಇಂದಿನಿಂದ ಎರಡು ದಿನಗಳ ಕಾಲ ಸಾರ್ವಜನಿಕರಿಗೆ ಅವಕಾಶ

BIG NEWS: ‘ಏರ್ ಶೋ’ ವೀಕ್ಷಿಸಲು ಇಂದಿನಿಂದ ಎರಡು ದಿನಗಳ ಕಾಲ ಸಾರ್ವಜನಿಕರಿಗೆ ಅವಕಾಶ

ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ‘ಏರ್ ಶೋ’ ಈಗಾಗಲೇ ಎಲ್ಲರ ಗಮನ ಸೆಳೆದಿದೆ. ಇದೀಗ ಇಂದಿನಿಂದ ಎರಡು ದಿನಗಳ ಕಾಲ ಏರ್ ಶೋ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಸಿಗಲಿದೆ.

ಆನ್ ಲೈನ್ ನಲ್ಲಿ ಟಿಕೆಟ್ ಬುಕ್ ಮಾಡಿದವರಿಗಷ್ಟೇ ಏರ್ ಶೋ ವೀಕ್ಷಣೆಗೆ ಅವಕಾಶ ಲಭ್ಯವಾಗಲಿದ್ದು, ಈಗಾಗಲೇ ಸಾಕಷ್ಟು ಸಂಖ್ಯೆಯಲ್ಲಿ ಸಾರ್ವಜನಿಕರು ಟಿಕೆಟ್ ಬುಕ್ ಮಾಡಿದ್ದಾರೆ ಎಂದು ಹೇಳಲಾಗಿದೆ.

ಈ ಏರ್ ಶೋನಲ್ಲಿ ಸಾರಂಗ್ ಹೆಲಿಕಾಪ್ಟರ್, ಸೂರ್ಯ ಕಿರಣ್ ತೇಜಸ್ವಿ ಯುದ್ಧವಿಮಾನ, ರಫೆಲ್ ಯುದ್ಧ ವಿಮಾನ, ಅಮೆರಿಕದ ಎಫ್ 35 ಎ ಫೈಟರ್ ಜೆಟ್, ಎಚ್ ಎ ಎಲ್ ನಿರ್ಮಿತ ಕಾಂಬಾಕ್ಟ್ ಹೆಲಿಕ್ಯಾಪ್ಟರ್ ಮೊದಲಾದವು ಪ್ರದರ್ಶನ ನೀಡಲಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular