ಶಾರುಖ್ ಖಾನ್ ನಟನೆಯ ʼಪಠಾಣ್ʼ ಚಿತ್ರ ಭರ್ಜರಿ ಯಶಸ್ಸು ಕಾಣುತ್ತಿರುವ ಬೆನ್ನಲ್ಲೇ ಹಲವರು ಇದರ ಹಾಡಿಗೆ ನೃತ್ಯ ಮಾಡುವ ವಿಡಿಯೋಗಳು ವೈರಲ್ ಆಗುತ್ತಿವೆ. ಈ ಹುಚ್ಚು ಕ್ರಿಕೆಟ್ ತಾರೆಯರನ್ನೂ ಬಿಟ್ಟಿಲ್ಲ. ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಮೈದಾನದಲ್ಲಿ ‘ಜೂಮ್ ಜೋ ಪಠಾನ್’ ಗೆ ನೃತ್ಯ ಮಾಡಿದ್ದು ಅದೀಗ ವೈರಲ್ ಆಗಿದೆ.
ಇದರ ವಿಡಿಯೋವನ್ನು ಅವರ ಅಭಿಮಾನಿಯೊಬ್ಬರು ಹಂಚಿಕೊಂಡಿದ್ದಾರೆ. ನಂತರ ಅದನ್ನು ಶಾರುಖ್ ಖಾನ್ ಅವರಿಗೆ ಟ್ಯಾಗ್ ಮಾಡಿ ಈ ಬಗ್ಗೆ ಒಂದೆರಡು ಮಾತನಾಡಿ ಎಂದಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ನಟ ಶಾರುಖ್ ಖಾನ್, “ಅವರು ನನಗಿಂತ ಉತ್ತಮವಾಗಿ ನೃತ್ಯ ಮಾಡಿದ್ದಾರೆ. ನೃತ್ಯ ಮಾಡುವುದನ್ನು ವಿರಾಟ್ ಮತ್ತು ಜಡೇಜಾ ಅವರಿಂದ ನಾನು ಕಲಿಯಬೇಕು” ಎಂದಿದ್ದಾರೆ. ಇದನ್ನು ಓದಿ ಶಾರುಖ್ ಅಭಿಮಾನಿಗಳು ಶಾರುಖ್ ಕುರಿತು ಹಾಡಿ ಹೊಗಳುತ್ತಿದ್ದಾರೆ.
ಅಷ್ಟಕ್ಕೂ ಕೊಹ್ಲಿ ಮತ್ತು ಜಡೇಜಾ ಈ ನೃತ್ಯಕ್ಕೆ ಹೆಜ್ಜೆ ಹಾಕಿದ್ದು ನಾಗ್ಪುರದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಭಾರತದ ಮೊದಲ ಟೆಸ್ಟ್ ಪಂದ್ಯದ ಸಂದರ್ಭದಲ್ಲಿ. ಮೊದಲಿಗೆ ಕೊಹ್ಲಿ ಪಠಾಣ್ ಚಿತ್ರದ ಹಾಡಿಗೆ ನರ್ತಿಸಿದ್ದರು. ನಂತರ ರವೀಂದ್ರ ಜಡೇಜಾ ಅವರನ್ನು ಸೇರಿಕೊಂಡು ತಾವೂ ಹೆಜ್ಜೆ ಹಾಕಿದ್ದರು.
https://twitter.com/Asifsrksoldier/status/1625399716195319808?ref_src=twsrc%5Etfw%7Ctwcamp%5Etweetembed%7Ctwterm%5E1625403978770169856%7Ctwgr%5Ef9b7552e059953ea2ce740d764d404c3e1c95f61%7Ctwcon%5Es3_&ref_url=https%3A%2F%2Fwww.news18.com%2Fbuzz%2Fsrk-approves-virat-kohlis-recreation-of-pathaan-step-during-australia-test-7078603.html
Kohli & Jadeja doing jhoome jo pathaan step? 😂❤️ #INDvsAUS #pathaan #ShahRukhKhan𓀠 #ViratKohli𓃵 #RavindraJadeja pic.twitter.com/089U6NjOwg
— Aarush Srk (@SRKAarush) February 11, 2023

