HomeKarnatakaBIG NEWS: ಬಾದಾಮಿಯಿಂದಲೇ ಸ್ಪರ್ಧಿಸುವಂತೆ ಅಭಿಮಾನಿಗಳ ಪಟ್ಟು; ದಯವಿಟ್ಟು ಕ್ಷಮಿಸಬೇಕು ಎಂದ ವಿಪಕ್ಷ ನಾಯಕ; ಸಿದ್ದರಾಮಯ್ಯ...

BIG NEWS: ಬಾದಾಮಿಯಿಂದಲೇ ಸ್ಪರ್ಧಿಸುವಂತೆ ಅಭಿಮಾನಿಗಳ ಪಟ್ಟು; ದಯವಿಟ್ಟು ಕ್ಷಮಿಸಬೇಕು ಎಂದ ವಿಪಕ್ಷ ನಾಯಕ; ಸಿದ್ದರಾಮಯ್ಯ ಮನೆ ಮುಂದೆ ಹೈಡ್ರಾಮಾ

ಬೆಂಗಳೂರು: ಬಾದಾಮಿ ಕ್ಷೇತ್ರದಿಂದಲೇ ಈ ಬಾರಿ ಚುನಾವಣೆಗೆ ಸ್ಪರ್ಧಿಸುವಂತೆ ಸಿದ್ದರಾಮಯ್ಯ ಅವರಿಗೆ ಬಾದಾಮಿ ಅಭಿಮಾನಿಗಳು ಒತ್ತಾಯಿಸಿದ್ದಾರೆ.

ಬೆಂಗಳೂರಿನ ಸರ್ಕಾರಿ ನಿವಾಸದ ಬಳಿ ಬಾದಾಮಿಯಿಂದ ಬಂದಿರುವ ಸಾವಿರಾರು ಅಭಿಮಾನಿಗಳು ಬಾದಾಮಿಯಿಂದಲೇ ಸಿದ್ದರಾಮಯ್ಯ ಸ್ಪರ್ಧಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಬಾದಾಮಿಯಲ್ಲಿ ಗೆಲ್ಲಿಸುವ ಜವಾಬ್ದಾರಿ ನಮ್ಮದು ಎಂದು ಹೇಳಿದ್ದಾರೆ.

ಈ ವೇಳೆ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ಇದು ನನ್ನ ಕೊನೇಯ ಚುನಾವಣೆ. ಹಾಗಾಗಿ ಸಮೀಪದ ಕ್ಷೇತ್ರದಿಂದ ಸ್ಪರ್ಧಿಸಲು ಚಿಂತನೆ ನಡೆಸಿ ಕೋಲಾರದಿಂದ ಸ್ಪರ್ಧಿಸುವ ಬಗ್ಗೆ ಹೇಳಿದ್ದೇನೆ. ದಯವಿಟ್ಟು ನನ್ನನ್ನು ಕ್ಷಮಿಸಿ. ಮೈಸೂರಿನಿಂದ ಬಂದ ನನ್ನನ್ನು ಬಾದಾಮಿಯಲ್ಲಿ ನಿವೆಲ್ಲರೂ ಗೆಲ್ಲಿಸಿದ್ದಿರಿ. ಅದಕ್ಕಾಗಿ ಧನ್ಯವಾದಗಳು. ಹೈಕಮಾಂಡ್ ಸೂಚಿಸಿದ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ಸಮಾಧಾನ ಪಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular