ಹೆಂಡ್ತಿಯನ್ನ ಕೊಂದು ಮಿಸ್ಸಿಂಗ್ ಕಂಪ್ಲೆಂಟ್ ದಾಖಲಿಸಿದ್ದ ಆರೋಪಿ ಅರೆಸ್ಟ್

ಹೆಂಡತಿಯನ್ನು ಹತ್ಯೆ ಮಾಡಿ ಬಳಿಕ ಅಪಹರಣ ಕೇಸ್ ದಾಖಲಿಸಿದ್ದ ವ್ಯಕ್ತಿಯನ್ನ ಜಾರ್ಖಂಡ್ ಪೊಲೀಸರು ಬಂಧಿಸಿದ್ದಾರೆ.

ಪತ್ನಿಯನ್ನು ಕೊಂದು ಹೂತಿಟ್ಟ ಆರೋಪದ ಮೇಲೆ ಆರೋಪಿ ಮನೀಶ್ ಬರನ್ವಾಲ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಗಿರ್ಡಿಹ್‌ನ ಉಪ ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ರಾಣಾ ತಿಳಿಸಿದ್ದಾರೆ.

ಜನವರಿ 1, 2022 ರಂದು, ಮನೀಷ್ ಬರನ್ವಾಲ್ ಎಂಬ ವ್ಯಕ್ತಿ ತನ್ನ ಹೆಂಡತಿ ಓಡಿಹೋದ ಅಥವಾ ಅಪಹರಣಕ್ಕೊಳಗಾದ ಪ್ರಕರಣವನ್ನು ದಾಖಲಿಸಿದ್ದ.

ಡಿಸೆಂಬರ್ 14, 2021 ರಿಂದ ತನ್ನ ಹೆಂಡತಿ ಕಾಣೆಯಾಗಿದ್ದಾಳೆ ಎಂದು ಆತ ಹೇಳಿದ್ದ. ವಿಚಾರಣೆ ನಡೆಸಿದಾಗ ಪತ್ನಿಯನ್ನು ಕೊಂದು ಶವವನ್ನು ಸ್ನೇಹಿತನ ಮನೆ ಹಿಂದೆ ಹೂತಿಟ್ಟಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.

ಮೃತದೇಹದ ಅವಶೇಷಗಳನ್ನು ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ. ನಾವು ಡಿಎನ್‌ಎ ಪರೀಕ್ಷೆಯನ್ನು ನಡೆಸುವ ಮೂಲಕ ದೇಹವನ್ನು ಪರೀಕ್ಷಿಸುತ್ತೇವೆ. ಮನೀಶ್‌ನನ್ನು ಬಂಧಿಸಲಾಗಿದೆ ಮತ್ತು ಇತರ ಆರೋಪಿಗಳನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ರಾಣಾ ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read