HomeKarnatakaBIG NEWS: ಸರ್ಕಾರಕ್ಕೆ ಕಪ್ಪುಚುಕ್ಕೆ ಇಟ್ಟು ಹೋಗಿದ್ದಾರೆ; ಈಶ್ವರಪ್ಪ ವಿರುದ್ಧ ಡಿ.ಕೆ.ಶಿ. ವಾಗ್ದಾಳಿ

BIG NEWS: ಸರ್ಕಾರಕ್ಕೆ ಕಪ್ಪುಚುಕ್ಕೆ ಇಟ್ಟು ಹೋಗಿದ್ದಾರೆ; ಈಶ್ವರಪ್ಪ ವಿರುದ್ಧ ಡಿ.ಕೆ.ಶಿ. ವಾಗ್ದಾಳಿ

ಬೆಂಗಳೂರು: ಶಿವಮೊಗ್ಗದಲ್ಲಿ ಶಾಂತಿ ಬಯಸಲು ಏನಿದೆ ಎಂಬ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆಗೆ ಕಿಡಿಕಾರಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಇವರು ಇಡೀ ಸರ್ಕಾರಕ್ಕೆ ಕಪ್ಪುಚುಕ್ಕೆ ಇಟ್ಟು ಹೋಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಶಿವಮೊಗ್ಗದಲ್ಲಿ 144 ಸೆಕ್ಷನ್ ಇದ್ದರೂ ಝಂಡಾ ಹಿಡಿದುಕೊಂಡು ಬಂದರು. ಕಾನೂನು ಉಲ್ಲಂಘನೆ ಮಾಡಿದ್ದಾರೆ. ಶಿವಮೊಗ್ಗದಲ್ಲಿ ಬೇರೆ ಯಾರು ಸತ್ತಾಗಲು ಒಂದು ರೂಪಾಯಿ ನೀಡದವರು ಹರ್ಷ ಸತ್ತಾಗ 15 ಲಕ್ಷ ಘೋಷಣೆ ಮಾಡಿದರು. ಮೊನ್ನೆ ಆಸ್ಪತ್ರೆಯಲ್ಲಿಯೂ ಜನ ಸತ್ತಾಗಲೂ ದುಡ್ಡು ಕೊಡಲಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶಿವಮೊಗ್ಗದಲ್ಲಿ ಶಾಂತಿ ನೆಲೆಸುವುದು ಬಿಜೆಪಿಯವರಿಗೆ ಬೇಕಿಲ್ಲ. ಆಯನೂರು ಮಂಜುನಾಥ್ ಸತ್ಯ ನುಡಿದಿದ್ದಾರೆ ಎಂದು ಗುಡುಗಿದರು.

For Latest News Updates, Join Our Whatsapp Community🚩
RELATED ARTICLES

Most Popular