HomeKarnatakaBIG NEWS: ಸವಾಲು ಸ್ವೀಕರಿಸಲು ನಾನ್ ರೆಡಿ; ಆದ್ರೆ ಪಕ್ಷ ಒಪ್ಪಬೇಕು ಎಂದ ಹೆಚ್.ಡಿ.ರೇವಣ್ಣ

BIG NEWS: ಸವಾಲು ಸ್ವೀಕರಿಸಲು ನಾನ್ ರೆಡಿ; ಆದ್ರೆ ಪಕ್ಷ ಒಪ್ಪಬೇಕು ಎಂದ ಹೆಚ್.ಡಿ.ರೇವಣ್ಣ

ಹಾಸನ: ಹಾಸನ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆಯ್ಕೆ ಗೊಂದಲ ಮುಂದುವರೆದಿರುವಾಗಲೇ ಬಿಜೆಪಿ ಶಾಸಕ ಪ್ರೀತಂಗೌಡ ಸವಾಲು ಹಾಕಿದ್ದು, ಧೈರ್ಯ ಇದ್ದರೆ ರೇವಣ್ಣ ಹಾಸನದಿಂದ ಸ್ಪರ್ಧಿಸಲಿ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಶಾಸಕ ಹೆಚ್.ಡಿ.ರೇವಣ್ಣ, ಸವಾಲು ಸ್ವೀಕರಿಸುವುದಾಗಿ ಘೋಷಿಸಿದ್ದಾರೆ.

ಪ್ರೀತಂಗೌಡ ಸವಾಲನ್ನೇ ದಾಳವನ್ನಾಗಿ ಬಳಸಲು ರೇವಣ್ಣ ಕುಟುಂಬ ಪ್ಲಾನ್ ಮಾಡಿದ್ದು, ಪ್ರೀತಂಗೌಡ ಸವಾಲು ಸ್ವೀಕರಿಸಲು ಸಿದ್ಧ. ಆದರೆ ಪಕ್ಷ ಒಪ್ಪಬೇಕು ಎಂದು ಹೇಳುವ ಮೂಲಕ ಚಂಡನ್ನು ಹೆಚ್.ಡಿ.ಕುಮಾರಸ್ವಾಮಿ ಅಂಗಳಕ್ಕೆ ಎಸೆದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರೇವಣ್ಣಗೆ ಧೈರ್ಯವಿದ್ದರೆ ಹಾಸನದಿಂದ ಸ್ಪರ್ಧಿಸಲಿ. ಹಾಸನದಿಂದ ರೇವಣ್ಣ ಸ್ಪರ್ಧಿಸಿದರೆ 50 ಸಾವಿರ ಮತಗಳ ಲೀಡ್ ನಿಂದ ನಾನು ಗೆಲ್ಲುತ್ತೇನೆ. 50 ಸಾವಿರ ಲೀಡ್ ನಲ್ಲಿ ಒಂದೇ ಒಂದು ಮತ ಕಡಿಮೆಯಾದರೂ ರಾಜೀನಾಮೆ ನೀಡಿ ಮತ್ತೆ ಚುನಾವಣೆಗೆ ಹೋಗುತ್ತೇನೆ ಎಂದು ಪ್ರೀತಂಗೌಡ ಸವಾಲು ಹಾಕಿದ್ದರು.

ಪ್ರೀತಂಗೌಡ ಸವಾಲು ಸ್ವೀಕರಿಸಿರುವ ರೇವಣ್ಣ ಹಾಸನದಿಂದ ಸ್ಪರ್ಧಿಸಲು ನಾನ್ ರೆಡಿ, ಪಕ್ಷ ಒಪ್ಪಬೇಕು ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular