ದೆಹಲಿಯಿಂದ ಪುಣೆಗೆ ಹೋಗುತ್ತಿದ್ದ ವಿಮಾನ ಪ್ರಯಾಣಿಕರು ವಿಮಾನ ತಡವಾದ ಕಾರಣ 1 ಗಂಟೆ ಬಸ್ ನಲ್ಲೇ ಕಾಲ ಕಳೆಯುವಂತಾದ ಘಟನೆ ಬಹಿರಂಗವಾಗಿದೆ.
150 ಕ್ಕೂ ಹೆಚ್ಚು ಪ್ರಯಾಣಿಕರು ಮಂಗಳವಾರ ತಮ್ಮ ವಿಮಾನ ವಿಳಂಬವಾದ ನಂತರ ಏರ್‌ಲೈನ್ ಒದಗಿಸಿದ ಬಸ್‌ಗಳಲ್ಲಿ ಒಂದು ಗಂಟೆ ಕುಳಿತಿದ್ದರು.
ದೆಹಲಿಯಿಂದ ಪುಣೆಗೆ ಹೋಗುವ ಗೋ ಫಸ್ಟ್ ವಿಮಾನವು ಬೆಳಿಗ್ಗೆ 9:30 ಕ್ಕೆ ಹೊರಡಬೇಕಾಗಿತ್ತು. ಆದರೆ ತಾಂತ್ರಿಕ ದೋಷದಿಂದಾಗಿ ವಿಳಂಬವಾಗಿದೆ.
ಬೆಳಿಗ್ಗೆ 9 ಗಂಟೆಗೆ ಪ್ರಯಾಣಿಕರನ್ನು 3-4 ಬಸ್‌ಗಳಿಗೆ ಸ್ಥಳಾಂತರಿಸಲಾಯಿತು ಮತ್ತು ಬೋರ್ಡಿಂಗ್ ಪ್ರಾರಂಭವಾದಾಗ ಬೆಳಿಗ್ಗೆ 10 ಗಂಟೆಯವರೆಗೆ ಬಸ್‌ಗಳಲ್ಲೇ ಪ್ರಯಾಣಿಕರಿದ್ದರು ಎಂದು ವರದಿಯಾಗಿದೆ. ಕೊನೆಗೆ 11 ಗಂಟೆಗೆ ವಿಮಾನ ಟೇಕಾಫ್ ಆಗಿದೆ.