HomeAstroಈ ರಾಶಿಯವರಿಗೆ ಕಾಡದು ಇಂದು ಹಣಕಾಸಿನ ಕೊರತೆ

ಈ ರಾಶಿಯವರಿಗೆ ಕಾಡದು ಇಂದು ಹಣಕಾಸಿನ ಕೊರತೆ

ಮೇಷ ರಾಶಿ

ದಿನದ ಆರಂಭ ಗೊಂದಲಮಯವಾಗಿರುತ್ತದೆ. ಹಠಮಾರಿ ಧೋರಣೆ ತೊರೆದು ಸಮಾಧಾನದಿಂದ ವರ್ತಿಸಲಿದ್ದೀರಿ. ನಿಮ್ಮ ಮಧುರವಾಣಿ ಮತ್ತು ಭಾಷೆಯಿಂದ ಇತರರ ಮನ ಗೆಲ್ಲಲಿದ್ದೀರಿ.

ವೃಷಭ ರಾಶಿ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇವತ್ತು ನಿಮಗೆ ಮಿಶ್ರಫಲವಿದೆ. ದಿನದ ಆರಂಭದಲ್ಲಿ ಸ್ಪೂರ್ತಿ ಮತ್ತು ಆನಂದದ ಅನುಭವವಾಗುತ್ತದೆ. ನಿಮ್ಮ ಸೃಜನಾತ್ಮಕ ಮತ್ತು ಕಲಾತ್ಮಕ ಶಕ್ತಿಯಲ್ಲಿ ಕೂಡ ವೃದ್ಧಿಯಾಗಲಿದೆ.

ಮಿಥುನ ರಾಶಿ

ಇವತ್ತು ಹೆಚ್ಚು ಚಿಂತಿತರಾಗಿರುತ್ತೀರಿ. ಶಾರೀರಿಕ ಆರೋಗ್ಯ ಕೂಡ ಹದಗೆಡುವ ಸಾಧ್ಯತೆ ಇದೆ. ಕುಟುಂಬದಲ್ಲೂ ಭಿನ್ನಾಭಿಪ್ರಾಯ ಕಾಣಿಸಿಕೊಳ್ಳುತ್ತದೆ. ಮಧ್ಯಾಹ್ನದ ನಂತರ ಎಲ್ಲಾ ಕಾರ್ಯಗಳೂ ಸರಾಗವಾಗಲಿವೆ.

ಕರ್ಕ ರಾಶಿ

ಇಂದು ಬೆಳಗಿನ ಸಮಯದಲ್ಲಿ ಕೌಟುಂಬಿಕ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಲಾಭವಿದೆ. ಸ್ತ್ರೀಯರಿಂದ ಲಾಭ ದೊರೆಯುವ ಸಾಧ್ಯತೆ ಇದೆ. ಪ್ರೀತಿಪಾತ್ರರನ್ನು ಭೇಟಿಯಾಗಲಿದ್ದೀರಿ. ಮಾನಸಿಕ, ದೈಹಿಕ ಆರೋಗ್ಯ ಉತ್ತಮವಾಗಿರುತ್ತದೆ.

ಸಿಂಹ ರಾಶಿ

ಇವತ್ತು ಆನಂದವಾಗಿ ದಿನ ಕಳೆಯಲಿದ್ದೀರಿ. ವ್ಯಾಪಾರಿಗಳಿಗೆ ಇಂದು ಲಾಭದಾಯಕ ದಿನ. ವ್ಯಾಪಾರದಲ್ಲಿ ವೃದ್ಧಿಯಾಗಲಿದೆ. ಕುಟುಂಬ ಸದಸ್ಯರು ಮತ್ತು ಸ್ನೇಹಿತರೊಂದಿಗೆ ಸಂತೋಷವಾಗಿ ಸಮಯ ಕಳೆಯಲಿದ್ದೀರಿ.

ಕನ್ಯಾ ರಾಶಿ

ಹೊಸ ಕಾರ್ಯವನ್ನು ಆರಂಭಿಸಲು ಸಮಯ ಅನುಕೂಲಕರವಾಗಿದೆ. ನಿಮ್ಮಲ್ಲಿ ಧಾರ್ಮಿಕ ಭಾವನೆ ಮತ್ತು ನಂಬಿಕೆ ಹೆಚ್ಚಲಿದೆ. ಕಚೇರಿ ಮತ್ತು ವ್ಯಾಪಾರದಲ್ಲಿ ಕೆಲಸದ ಒತ್ತಡ ಹೆಚ್ಚಾಗಲಿದೆ.

ತುಲಾ ರಾಶಿ

ಊಟ-ತಿಂಡಿ ಬಗ್ಗೆ ವಿಶೇಷ ಗಮನಹರಿಸಿ. ಹೊಸ ಕೆಲಸ ಆರಂಭಿಸಲು ಸಮಯ ಅನುಕೂಲಕರವಾಗಿಲ್ಲ. ಅಧಿಕ ಕೆಲಸದಿಂದಾಗಿ ಮನಸ್ಸಿನ ಶಿಥಿಲತೆ ಮತ್ತು ವ್ಯಗ್ರತೆ ಹೆಚ್ಚಲಿದೆ.

ವೃಶ್ಚಿಕ ರಾಶಿ

ದಾಂಪತ್ಯ ಜೀವನದ ಸುಖ ನಿಮಗೆ ದೊರೆಯಲಿದೆ. ಕುಟುಂಬದವರೊಂದಿಗೆ ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಲಿದ್ದೀರಿ. ಚಿಕ್ಕದೊಂದು ಪ್ರವಾಸಕ್ಕೆ ತೆರಳಲಿದ್ದೀರಿ. ಮಧ್ಯಾಹ್ನದ ನಂತರ ಆರೋಗ್ಯ ಹದಗೆಡುವ ಸಾಧ್ಯತೆ ಇದೆ.

ಧನು ರಾಶಿ

ಇಂದು ಶುಭ ಫಲವಿದೆ. ಅಪೂರ್ಣ ಕಾರ್ಯಗಳನ್ನು ಪೂರ್ಣಗೊಳಿಸಲಿದ್ದೀರಿ. ಹಣಕಾಸಿನ ಕೊರತೆಯಾಗುವುದಿಲ್ಲ. ಕಚೇರಿಯಲ್ಲಿ ಸಹೋದ್ಯೋಗಿಗಳ ಸಹಕಾರ ದೊರೆಯುತ್ತದೆ.

ಮಕರ ರಾಶಿ

ಮಧುರ ಮಾತುಗಳಿಂದ ಇತರರ ಮನಸ್ಸು ಗೆಲ್ಲಲಿದ್ದೀರಿ. ಹೊಸ ಸಂಬಂಧಗಳು ಬೆಸೆಯಲಿವೆ. ಇಡೀ ದಿನ ಆನಂದವಾಗಿ ಕಳೆಯಲಿದೆ.

ಕುಂಭ ರಾಶಿ

ಪ್ರತಿ ಕಾರ್ಯವನ್ನೂ ಆತ್ಮವಿಶ್ವಾಸದಿಂದ ಮಾಡಲಿದ್ದೀರಿ. ಸರ್ಕಾರದ ಜೊತೆಗಿನ ಆರ್ಥಿಕ ವ್ಯವಹಾರದಲ್ಲಿ ಯಶಸ್ಸು ಸಿಗಲಿದೆ. ಮನೆ, ಸಂಪತ್ತು, ದಾಖಲೆಗಳ ವ್ಯವಹಾರದಲ್ಲಿ ಎಚ್ಚರಿಕೆಯಿಂದಿರಿ.

ಮೀನ ರಾಶಿ

ಇಂದು ಮನಸ್ಸು ಹಗುರವಾಗಲಿದೆ. ಆನಂದ ಮತ್ತು ಉತ್ಸಾಹದಲ್ಲೂ ವೃದ್ಧಿಯಾಗಲಿದೆ. ಕೌಟುಂಬಿಕ ಮತ್ತು ಆರ್ಥಿಕ ವಿಷಯದ ಬಗ್ಗೆ ಹೆಚ್ಚಿನ ಗಮನ ಕೊಡಿ. ಎಲ್ಲಾ ಕೆಲಸಗಳನ್ನೂ ದೃಢ ಚಿತ್ತ ಮತ್ತು ಆತ್ಮವಿಶ್ವಾಸದಿಂದ ಮಾಡಲಿದ್ದೀರಿ.

For Latest News Updates, Join Our Whatsapp Community🚩
RELATED ARTICLES

Most Popular