HomeIndiaಪತಿಯ ಮನೆಗೆ ಹೋಗುವ ಅಕ್ಕನ ನೆನೆದು ಅಂಧ ತಂಗಿ ಕಣ್ಣೀರು: ನೃತ್ಯದೊಂದಿಗೆ ಸಾಂತ್ವನ

ಪತಿಯ ಮನೆಗೆ ಹೋಗುವ ಅಕ್ಕನ ನೆನೆದು ಅಂಧ ತಂಗಿ ಕಣ್ಣೀರು: ನೃತ್ಯದೊಂದಿಗೆ ಸಾಂತ್ವನ

ದೇಸಿ ವಧು ಒಬ್ಬಳು ತನ್ನ ದೃಷ್ಟಿಹೀನ ಸಹೋದರಿಯೊಂದಿಗೆ ʼಎಲಿ ರೆ ಎಲಿʼಗೆ ನೃತ್ಯ ಮಾಡಿದ ಹಳೆಯ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ವೈರಲ್ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಫಿಟ್‌ನೆಸ್ ಬ್ಲಾಗರ್ ಕರಿಷ್ಮಾ ಪಟೇಲ್ ಹಂಚಿಕೊಂಡಿದ್ದಾರೆ.

ಕರಿಷ್ಮಾಳ ಅಕ್ಕ ಚಾಂದಿನಿ ದುಃಖಿತಳಾಗಿದ್ದಳು. ಏಕೆಂದರೆ ಕರಿಷ್ಮಾ ಮದುವೆಯಾಗುತ್ತಾಳೆ ಮತ್ತು ಅಂತಿಮವಾಗಿ ತನ್ನ ಮನೆಯನ್ನು ತೊರೆಯುತ್ತಾಳೆ ಎಂದು. ಆದ್ದರಿಂದ, ಅವಳನ್ನು ಹುರಿದುಂಬಿಸಲು ಸಂಗೀತ ಸಮಾರಂಭದಲ್ಲಿ ಅವರ ಪ್ರದರ್ಶನದ ಸಮಯದಲ್ಲಿ ಅವಳನ್ನು ನಗಿಸಲು ಪ್ರಯತ್ನಿಸಿದ್ದಾಳೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

“ನೃತ್ಯದ ಸಮಯದಲ್ಲಿ ನಾನು ಅವಳೊಂದಿಗೆ ಮಾತನಾಡುತ್ತಿದ್ದೇನೆ, ಅವಳನ್ನು ನಗಿಸಲು ಪ್ರಯತ್ನಿಸುತ್ತಿದ್ದೆನೆ. ನಾನು ಮದುವೆಯಾಗಿ ಹೋದ ಮೇಲೆ ಆಕೆಯಿಂದ ಬೇರೆಯಾಗುತ್ತೇನೆ. ಇದನ್ನು ನೆನಪಿಸಿಕೊಂಡು ಆಕೆ ಅಳುತ್ತಿದ್ದಾಳೆ. ಅವಳ ನಗುವಿಗಾಗಿ ಏನು ಬೇಕಾದರೂ ಮಾಡಬಲ್ಲೆ” ಎಂದು ಆಕರ್ಷಕವಾಗಿ ನೃತ್ಯ ಮಾಡಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಅಂಧ ತಂಗಿಯನ್ನೂ ಕರೆದುಕೊಂಡು ನೃತ್ಯ ಮಾಡಿದ್ದಾರೆ.

ಸಾಂತ್ವನದ ಈ ವಿಡಿಯೋ ನೋಡಿ ನೆಟ್ಟಿಗರು ಭಾವುಕರಾಗಿದ್ದಾರೆ. ಅಕ್ಕನಿಗೆ ತಂಗಿ ಸಂಗೀತದ ಮೂಲಕ ವಿದಾಯ ಹೇಳಿದ್ದೂ ನೆಟ್ಟಿಗರ ಮನಸ್ಸನ್ನು ಗೆದ್ದಿದೆ. ತಮ್ಮ ಮದುವೆಯ ಕಥೆಗಳನ್ನು ಹಂಚಿಕೊಂಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular