HomeEntertainmentಕರೀನಾಳನ್ನೇ ಹೋಲುವ ಯುವತಿಯ ವಿಡಿಯೋ ವೈರಲ್​: ನೆಟ್ಟಿಗರಿಂದ ಅಚ್ಚರಿ

ಕರೀನಾಳನ್ನೇ ಹೋಲುವ ಯುವತಿಯ ವಿಡಿಯೋ ವೈರಲ್​: ನೆಟ್ಟಿಗರಿಂದ ಅಚ್ಚರಿ

ಬಾಲಿವುಡ್ ಟಾಪ್ ನಟಿ ಕರೀನಾ ಕಪೂರ್ ಖಾನ್ ಅವರ ಮುಖಚಹರೆ ಹೋಲುವ ಮಹಿಳೆ ಅಸ್ಮಿತಾ ಅವರ ವಿಡಿಯೋ ಒಂದು ಇದೀಗ ವೈರಲ್​ ಆಗಿದೆ. ಈಕೆ ಕೇವಲ ಕರೀನಾ ಅವರನ್ನು ಹೋಲುವುದಿಲ್ಲ, ಬದಲಿಗೆ ಅವರಂತೆಯೇ ಸರಳವಾದ ಹುಬ್ಬು ಏರಿಳಿತದಿಂದ ಹಿಡಿದು ನಗುವಿನವರೆಗೆ ಎಲ್ಲವೂ ಕರೀನಾ ಇದ್ದಂತೆಯೇ ಇದೆ.

ಅಷ್ಟೇ ಅಲ್ಲದೇ ಅಸ್ಮಿತಾ ಅವರು ಕರೀನಾರ ಪ್ರತಿಯೊಂದು ಅಭಿವ್ಯಕ್ತಿಯನ್ನು ಅನುಕರಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಕರೀನಾ ಅವರ ಐಕಾನಿಕ್ ನಗಾಡ ನಗಾಡಾ ಹಾಡಿಗೆ ಅಸ್ಮಿತಾ ಲಿಪ್-ಸಿಂಕ್ಸಿಂಗ್ ಮತ್ತು ಗ್ರೂವಿಂಗ್ ಮಾಡುವ ವಿಡಿಯೋ ವೈರಲ್​ ಆಗಿದ್ದು, ನಿಜಕ್ಕೂ ಈಕೆ ಕರೀನಾಳ ಅವಳಿ ಸಹೋದರಿ ಇರಬಹುದು ಎನ್ನಿಸುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆನ್‌ಲೈನ್‌ನಲ್ಲಿ ಶೇರ್ ಆದ ಕೆಲವೇ ಕ್ಷಣಗಳಲ್ಲಿ ವಿಡಿಯೋ ವೈರಲ್ ಆಗಿದೆ. ಅಸ್ಮಿತಾ ಅವರು ಗುಲಾಬಿ ಬಣ್ಣದ ಬಟ್ಟೆ ತೊಟ್ಟು ಕರೀನಾರಂತೆ ನೃತ್ಯದ ಚಲನೆ ಮಾಡಿದ್ದಾರೆ. ಕರೀನಾ ಕಪೂರ್‌ ಹಾಗೂ ಅಸ್ಮಿತಾರ ಹೋಲಿಕೆ ಕಂಡು ನೆಟ್ಟಿಗರು ತಮಾಷೆಯ ಕಮೆಂಟ್​ಗಳನ್ನು ಮಾಡುತ್ತಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular