HomeIndiaತಂಪು ಪಾನೀಯ ಟ್ರಕ್ ಉರುಳಿ ಬೀಳ್ತಿದ್ದಂತೆ ತುಂಬಿಕೊಳ್ಳಲು ಮುಗಿಬಿದ್ದ ಜನ

ತಂಪು ಪಾನೀಯ ಟ್ರಕ್ ಉರುಳಿ ಬೀಳ್ತಿದ್ದಂತೆ ತುಂಬಿಕೊಳ್ಳಲು ಮುಗಿಬಿದ್ದ ಜನ

ತಂಪು ಪಾನೀಯ ಸಾಗಿಸ್ತಿದ್ದ ಟ್ರಕ್ ರಸ್ತೆ ಮೇಲೆ ಉರುಳಿ ಬೀಳ್ತಿದ್ದಂತೆ ಜನ ಪಾನೀಯ ತುಂಬಿಕೊಳ್ಳಲು ನಾ ಮುಂದು ತಾ ಮುಂದು ಎಂದು ಮುಗಿಬಿದ್ದರು. ಮಹಾರಾಷ್ಟ್ರದ ಕೊಲ್ಹಾಪುರ-ರತ್ನನಗರಿ ರಸ್ತೆಯ ಪುಯಿಖಾಡಿ ಪ್ರದೇಶದ ಬಳಿ ತಂಪು ಪಾನೀಯಗಳನ್ನು ಸಾಗಿಸುತ್ತಿದ್ದ ಟ್ರಕ್ ಪಲ್ಟಿಯಾಯಿತು.

ಟ್ರಕ್ ಅಪಘಾತದ ನಂತರ ರಸ್ತೆಯಲ್ಲಿ ಸ್ಥಳೀಯರು ಮತ್ತು ಪ್ರಯಾಣಿಕರು ಪಾನೀಯವನ್ನ ಲೂಟಿ ಮಾಡಲು ನಿಂತರು. ಹಲವರು ತಮ್ಮ ವಾಹನಗಳಿಗೆ ಪಾನೀಯ ಬಾಟಲಿಗಳನ್ನು ತುಂಬಿಸಿಕೊಳ್ಳುತ್ತಿದ್ದರು. ಈ ಪ್ರಕರಣವನ್ನು ಸೆರೆ ಹಿಡಿದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಪಘಾತದ ಸ್ಥಳದಲ್ಲಿ ಲೂಟಿ ಮಾಡುವಾಗ ಕೆಲವು ವ್ಯಕ್ತಿಗಳು ತಮ್ಮ ಗುರುತನ್ನು ಬಹಿರಂಗಪಡಿಸದಿರಲು ಕರವಸ್ತ್ರದಿಂದ ಮುಖವನ್ನು ಮರೆಮಾಡುತ್ತಿರುವುದು ಕಂಡುಬಂದಿದೆ.

ಶನಿವಾರ ಮುಂಜಾನೆ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ ಚಾಲಕ ಮತ್ತು ಅವನ ಜೊತೆಗಿದ್ದವರಿಗೆ ಗಾಯಗಳಾಗಿದ್ದು, ವೈದ್ಯಕೀಯ ಆರೈಕೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರನ್ನು ಇಂದೋರ್ ನಿವಾಸಿಗಳಾದ ರಾಮಲಿಂಗ್ ಸಿಂಗ್ (30) ಮತ್ತು ಗುರ್ ಸಿಂಗ್ (22) ಎಂದು ಗುರುತಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular