ರಾಯಲ್ ಎನ್‌ಫೀಲ್ಡ್ ಕಂಪನಿಯ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಜನವರಿ ತಿಂಗಳಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ಮಾರಾಟ ಜೋರಾಗಿತ್ತು. ಒಟ್ಟಾರೆ 6 ಬೈಕ್ ಕಂಪನಿಗಳು 11,17,990 ಯುನಿಟ್‌ಗಳನ್ನು ಮಾರಾಟ ಮಾಡಿವೆ. ಇದು 2022ರ ಜನವರಿಗೆ ಹೋಲಿಸಿದ್ರೆ ಶೇ.2.80ರಷ್ಟು ಹೆಚ್ಚಾಗಿದೆ. ಇವುಗಳಲ್ಲಿ ಹೀರೋ ಮೋಟೋಕಾರ್ಪ್, ಹೋಂಡಾ, ಟಿವಿಎಸ್ ಮೋಟಾರ್, ಬಜಾಜ್ ಆಟೋ, ಎನ್‌ಫೀಲ್ಡ್ ಮತ್ತು ಸುಜುಕಿ ಸೇರಿವೆ. ಹೀರೋ ಮೊಟೊಕಾರ್ಪ್ ಮೊದಲ ಸ್ಥಾನದಲ್ಲಿದೆ ಮತ್ತು ಹೋಂಡಾ ಎರಡನೇ ಸ್ಥಾನದಲ್ಲಿದೆ. ರಾಯಲ್ ಎನ್‌ಫೀಲ್ಡ್ ಐದನೇ ಸ್ಥಾನದಲ್ಲಿದ್ದರೂ ಮಾರಾಟದಲ್ಲಿ ಭಾರೀ ಹೆಚ್ಚಳವನ್ನು ದಾಖಲಿಸಿದೆ.
36 ಪ್ರತಿಶತಕ್ಕಿಂತಲೂ ಹೆಚ್ಚಿನ ವಾರ್ಷಿಕ ಬೆಳವಣಿಗೆಗೆ ಸಾಕ್ಷಿಯಾಗಿದೆ. 2023 ರ ಜನವರಿ ತಿಂಗಳಿನಲ್ಲಿ ಹಿರೋ ಮೋಟೋಕಾರ್ಪ್ ಮಾರಾಟ ವಾರ್ಷಿಕ ಲೆಕ್ಕಾಚಾರದಲ್ಲಿ ಕುಸಿತ ಕಂಡಿದೆ. ಹೀರೋ ಮೋಟೋಕಾರ್ಪ್ ಜನವರಿಯಲ್ಲಿ ಒಟ್ಟು 3,49,437 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಆದೆ 2022ರ ಜನವರಿಯಲ್ಲಿ 3,58,660 ಯುನಿಟ್‌ಗಳು ಮಾರಾಟವಾಗಿದ್ದವು. ಸೇಲ್ಸ್ ಶೇ.2.57 ರಷ್ಟು ಕಡಿಮೆಯಾಗಿದೆ. ಅದೇ ರೀತಿ ಎರಡನೇ ಸ್ಥಾನದಲ್ಲಿರುವ ಹೋಂಡಾ ದ್ವಿಚಕ್ರ ವಾಹನಗಳ ಮಾರಾಟವು ವಾರ್ಷಿಕವಾಗಿ 11.76 ಪ್ರತಿಶತದಷ್ಟು ಕಡಿಮೆಯಾಗಿದೆ. ಕಂಪನಿ ಕಳೆದ ತಿಂಗಳು 2,78,143 ಯುನಿಟ್‌ಗಳನ್ನು ಮಾರಾಟ ಮಾಡಿದೆ.
ಜನವರಿ 2022 ರಲ್ಲಿ 2,78,143 ಯುನಿಟ್‌ಗಳು ಬಿಕರಿಯಾಗಿದ್ದವು. TVS ಮೋಟಾರ್ಸ್ 2023ರ ಜನವರಿಯಲ್ಲಿ ಶೇ.29ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ, 2,16,471 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಬಜಾಜ್ ಆಟೋದ ಮಾರಾಟವು ಕೂಡ ಶೇ.3.34ರಷ್ಟು ಏರಿಕೆಯಾಗಿದೆ. ರಾಯಲ್ ಎನ್‌ಫೀಲ್ಡ್ ಅಗ್ರ 6 ಕಂಪನಿಗಳಲ್ಲಿ ಅತ್ಯಧಿಕ ಬೆಳವಣಿಗೆಯನ್ನು ದಾಖಲಿಸಿದೆ. ಕಂಪನಿಯು ಜನವರಿ 2023 ರಲ್ಲಿ 67,702 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಕಂಪನಿ 2022ರ ಜನವರಿಯಲ್ಲಿ 49,726 ಯುನಿಟ್‌ಗಳನ್ನು ಸೇಲ್ ಮಾಡಿತ್ತು. ಅದಕ್ಕೆ ಹೋಲಿಸಿದರೆ ಶೇ.36.15 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ರಾಯಲ್ ಎನ್‌ಫೀಲ್ಡ್ ಭಾರತದಲ್ಲಿ ಕ್ಲಾಸಿಕ್ 350, ಹಂಟರ್ 350, ಬುಲೆಟ್ 350, ಕ್ಲಾಸಿಕ್ 500 ಬೈಕ್‌ಗಳನ್ನು ಮಾರಾಟ ಮಾಡುತ್ತದೆ.