HomeCrimeಪತ್ನಿ ಕೊಂದು ಶವ ಕೊಳೆಯದಂತೆ ಉಪ್ಪು ಸುರಿದು ಬಚ್ಚಿಟ್ಟ ಪತಿ; ಬಳಿಕ ಹೊಲದಲ್ಲಿ ಹೂತು ಸಮಾಧಿ...

ಪತ್ನಿ ಕೊಂದು ಶವ ಕೊಳೆಯದಂತೆ ಉಪ್ಪು ಸುರಿದು ಬಚ್ಚಿಟ್ಟ ಪತಿ; ಬಳಿಕ ಹೊಲದಲ್ಲಿ ಹೂತು ಸಮಾಧಿ ಮೇಲೆ ತರಕಾರಿ ಬೆಳೆ

ಪತ್ನಿಯನ್ನು ಕೊಂದು ಆಕೆಯನ್ನ ಉಪ್ಪಿನ ಮೂಟೆಯಲ್ಲಿ ಸುತ್ತಿಟ್ಟು ಶವವನ್ನು ಹೊಲದಲ್ಲಿ ಹೂತಿಟ್ಟ. ನಂತರ ಶವವಿದ್ದ ಜಾಗದಲ್ಲಿ ತರಕಾರಿ ಬೆಳೆದು ಯಾರಿಗೂ ಅನುಮಾನ ಬರದಂತೆ ವರ್ತಿಸಿದ್ದ ಆರೋಪಿಯನ್ನ ಉತ್ತರ  ಪ್ರದೇಶದಲ್ಲಿ ಬಂಧಿಸಲಾಗಿದೆ.

ಪತ್ನಿಯನ್ನು ಕೊಂದು ಗಾಜಿಯಾಬಾದ್ ಬಳಿಯ ಹೊಲವೊಂದರಲ್ಲಿ ಹೂತಿಟ್ಟಿದ್ದ ದಿನೇಶ್ ಎಂಬ ತರಕಾರಿ ಮಾರಾಟಗಾರನೇ ಕೊಲೆಗಾರ. ಅಧಿಕಾರಿಗಳ ಪ್ರಕಾರ ದಿನೇಶ್ ಜನವರಿ 25 ರಂದು ಕೌಟುಂಬಿಕ ಕಲಹದಿಂದ ತನ್ನ ಹೆಂಡತಿಯನ್ನು ಕತ್ತು ಹಿಸುಕಿ ಕೊಂದಿದ್ದಾನೆ.

ನಂತರ ಶವವನ್ನು ಒಂದು ದಿನ ತನ್ನ ಮನೆಯಲ್ಲಿ ಇಟ್ಟುಕೊಂಡಿದ್ದ. ಈ ವೇಳೆ ಶವ ಕೊಳೆಯದಂತೆ ಅದಕ್ಕೆ 30 ಕೆಜಿ ಉಪ್ಪು ಸುರಿದು ಸಂರಕ್ಷಿಸಿದ್ದ. ನಂತರ ಅದನ್ನು ಹೊಲದಲ್ಲಿ ಹೂತುಹಾಕಿದ್ದ. ಆರೋಪಿ ಸಮಾಧಿ ಸ್ಥಳದ ಮೇಲೆ ತರಕಾರಿ ಬೆಳೆದು ಯಾರಿಗೂ ಅನುಮಾನ ಬರದಂತೆ ನಡೆದುಕೊಂಡಿದ್ದ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದರೆ, ಕೆಲ ದಿನಗಳ ನಂತರ ಪತ್ನಿ ನಾಪತ್ತೆಯಾಗಿರುವ ಬಗ್ಗೆ ದಿನೇಶ್ ಪೊಲೀಸರಿಗೆ ದೂರು ನೀಡಿದ್ದ. ಪ್ರಕರಣವನ್ನು ಪರಿಶೀಲಿಸಿದಾಗ ದಿನೇಶ್ ತನ್ನ ಪತ್ನಿಗೆ ವಿವಾಹೇತರ ಸಂಬಂಧ ಹೊಂದಿದ್ದಾಳೆ ಎಂಬ ಕಾರಣಕ್ಕೆ ಕೋಪಗೊಂಡು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಪೊಲೀಸರು ಶೀಘ್ರವೇ ಆತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಆತ ಅಪರಾಧವನ್ನು ಒಪ್ಪಿಕೊಂಡಿದ್ದಾನೆ.

For Latest News Updates, Join Our Whatsapp Community🚩
RELATED ARTICLES

Most Popular