HomeLatest Newsಟೀಂ ಇಂಡಿಯಾ ಆಟಗಾರ ದೀಪಕ್ ಚಹಾರ್ ಪತ್ನಿಗೆ ಬರೋಬ್ಬರಿ 10 ಲಕ್ಷ ರೂ. ವಂಚನೆ

ಟೀಂ ಇಂಡಿಯಾ ಆಟಗಾರ ದೀಪಕ್ ಚಹಾರ್ ಪತ್ನಿಗೆ ಬರೋಬ್ಬರಿ 10 ಲಕ್ಷ ರೂ. ವಂಚನೆ

ಭಾರತದ ವೇಗದ ಬೌಲರ್ ದೀಪಕ್ ಚಹಾರ್ ಅವರ ಪತ್ನಿ ಜಯ ಭಾರದ್ವಾಜ್ ಅವರಿಗೆ ಹೈದರಾಬಾದ್‌ನ ಇಬ್ಬರು ವ್ಯಕ್ತಿಗಳು 10 ಲಕ್ಷ ರೂಪಾಯಿ ವಂಚಿಸಿದ್ದಾರೆ ಎಂದು ವರದಿಯಾಗಿದೆ. ವ್ಯಾಪಾರ ಮಾಡುವ ನೆಪದಲ್ಲಿ ತೆಗೆದುಕೊಂಡಿದ್ದ ಹಣವನ್ನು ಹಿಂದಿರುಗಿಸಲು ಇಬ್ಬರೂ ನಿರಾಕರಿಸಿದ ಹಿನ್ನೆಲೆಯಲ್ಲಿ ಚಹಾರ್ ಕುಟುಂಬ ಪೊಲೀಸ್ ದೂರು ದಾಖಲಿಸಿದೆ.

ದೀಪಕ್ ತಂದೆ ಲೋಕೇಂದ್ರ ಚಾಹರ್ ಆಗ್ರಾದ ಹರಿ ಪರ್ವತ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಚಹಾರ್ ಕುಟುಂಬವು ಹಣವನ್ನು ಹಿಂದಿರುಗಿಸುವಂತೆ ಕೇಳಿದಾಗ, ಅವರು ಕೊಲೆ ಬೆದರಿಕೆ ಹಾಕಿದ್ದ ಬಗ್ಗೆ ಎಫ್ಐಆರ್ ನಲ್ಲಿ ಉಲ್ಲೇಖವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವರದಿಯ ಪ್ರಕಾರ ಈ ಪ್ರಕರಣದ ಆರೋಪಿಗಳು ಧ್ರುವ ಪರೀಕ್ ಮತ್ತು ಕಮಲೇಶ್ ಪರೀಕ್ ಎಂಬುದು ತಿಳಿದುಬಂದಿದೆ. ಅವರಲ್ಲಿ ಒಬ್ಬರು ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್‌ನಲ್ಲಿ (ಎಚ್‌ಸಿಎ) ಅಧಿಕಾರಿಯಾಗಿದ್ದರು ಎಂದು ವರದಿಯಾಗಿದೆ.

ಆರೋಪಿಗಳು ಜಯಾ ಅವರಿಂದ ಅಕ್ಟೋಬರ್ 7, 2022 ರಂದು ಹಣವನ್ನು ತೆಗೆದುಕೊಂಡರು ಮತ್ತು ಇನ್ನೂ ಆ ಹಣವನ್ನು ಹಿಂದಿರುಗಿಸಿಲ್ಲ.

For Latest News Updates, Join Our Whatsapp Community🚩
RELATED ARTICLES

Most Popular