ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಸುಶಾಂತ್ ನಂದಾ ಅವರು ಭಾರತದ ಟೀ ಎಸ್ಟೇಟ್‌ನಲ್ಲಿ ಹುಲಿಯೊಂದು ಸುತ್ತಾಡುತ್ತಿರುವ ವೀಡಿಯೊವನ್ನು ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ದಕ್ಷಿಣ ಭಾರತದ್ದು ಎಂದು ಹೇಳಲಾಗುತ್ತಿದೆ.
ವೀಡಿಯೋವನ್ನು ಆರಂಭದಲ್ಲಿ ವನ್ಯಜೀವಿ ಛಾಯಾಗ್ರಾಹಕ ಮನೋ ಅವರು ಹಂಚಿಕೊಂಡಿದ್ದಾರೆ ಮತ್ತು ನಂತರ ಅದನ್ನು ಸುಶಾಂತ್ ನಂದಾ ಶೇರ್ ಮಾಡಿದ್ದಾರೆ. “ಇಲ್ಲಿ ಟೀ ಎಸ್ಟೇಟ್‌ನಲ್ಲಿ ಭವ್ಯವಾದ ಹುಲಿ ಇದೆ. ಆದರೆ ಎಲ್ಲರಿಗೂ ಈ ಸುಂದರ ನೋಟವನ್ನು ಸವಿಯಲು ಸಾಧ್ಯವಿಲ್ಲ. ಇಂಥ ಸುಂದರ ನೋಟ ಕಂಡವರೇ ಅದೃಷ್ಟವಂತರು ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.
ಹುಲಿಯನ್ನು ನೋಡಲು ಕೆಲವರು ಸಫಾರಿಗೆ ಹೋಗುತ್ತಾರೆ. ಆದರೆ ಇಂಥ ಸುಂದರ ದೃಶ್ಯವನ್ನು ನೋಡಲು ಸಿಗುವುದು ಬಲು ಅಪರೂಪ ಎಂದು ಅವರು ಹೇಳಿದ್ದಾರೆ. ವೀಡಿಯೊ ಸುಮಾರು 5 ಸಾವಿರ ವೀಕ್ಷಣೆಗಳನ್ನು ಹೊಂದಿದ್ದು, ಹುಲಿಯ ನೋಟಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. “80 ರ ಹಳೆಯ ಲಿಪ್ಟನ್ ಟೈಗರ್ ಟೀ ಜಾಹೀರಾತನ್ನು ನನಗೆ ನೆನಪಿಸುತ್ತದೆ” ಎಂದು ಕೆಲ ಬಳಕೆದಾರರು ಬರೆದಿದ್ದಾರೆ.
Here is a majestic tiger in a tea estate. Some go to Tiger Reserves in Safari, number of times & don’t spot one & some are lucky to have such a grandeur view.
Via @Mano_Wildlife pic.twitter.com/NN73pVRMK2— Susanta Nanda IFS (Retd) (@susantananda3) February 2, 2023
What a sharply contrasting image- a majestic Tiger in a Tea estate- Tea estates although appearing beautiful signify loss of forests and creation of artificial 'forest islands'
— Priyvrat Gadhvi (@Priyvratgadhvi) February 2, 2023
What a lovely sighting 📸
— TheReviewPicker (@TheReviewPicker) February 2, 2023
Such a huge and Majestic Tiger!
Susanta ji where is this Tea Estate Pl.— Narayan Mahadevan (@tmnarayan) February 2, 2023

