HomeAutoಉದ್ಯೋಗಿಗಳಿಗೆ ಭರ್ಜರಿ ಗಿಫ್ಟ್: ಕಂಪನಿ ಬೆಳವಣಿಗೆಗೆ ಕಾರಣರಾದ ನೌಕರರಿಗೆ ಕಾರ್ ಕೊಟ್ಟ ಮಾಲೀಕ

ಉದ್ಯೋಗಿಗಳಿಗೆ ಭರ್ಜರಿ ಗಿಫ್ಟ್: ಕಂಪನಿ ಬೆಳವಣಿಗೆಗೆ ಕಾರಣರಾದ ನೌಕರರಿಗೆ ಕಾರ್ ಕೊಟ್ಟ ಮಾಲೀಕ

ಅಹಮದಾಬಾದ್: ಅಹಮದಾಬಾದ್‌ ನ ಐಟಿ ಸಂಸ್ಥೆಯು ಉದ್ಯೋಗಿಗಳಿಗೆ ಕಾರ್ ಗಳನ್ನು ನೀಡಿ ಗೌರವಿಸಿದೆ, ತ್ರಿಧ್ಯಾ ಟೆಕ್ ಐಟಿ ಸಂಸ್ಥೆಯು ಕಂಪನಿಯ ಬೆಳವಣಿಗೆಗೆ ಕೊಡುಗೆ ನೀಡಿದ 13 ಉದ್ಯೋಗಿಗಳಿಗೆ ಕಾರ್ ಗಳನ್ನು ಉಡುಗೊರೆಯಾಗಿ ನೀಡಿದೆ.

ಉದ್ಯೋಗಿಗಳ ಕಠಿಣ ಪರಿಶ್ರಮ ಅವರ ಸಮರ್ಪಣೆಗಾಗಿ ಶ್ಲಾಘನೆಯ ಸಂಕೇತವಾಗಿ ಕಾರ್ ನೀಡಲಾಗಿದೆ. ತ್ರಿಧ್ಯಾ ಟೆಕ್ ಡಿಜಿಟಲ್ ಟ್ರಾನ್ಸ್‌ ಫರ್ಮೇಷನ್ ಸೇವೆಗಳನ್ನು ಒದಗಿಸುತ್ತದೆ. ಈ ಉದ್ಯೋಗಿಗಳು ಮೊದಲಿನಿಂದಲೂ ಈ ಐಟಿ ಕಂಪನಿಯೊಂದಿಗೆ ಸಂಬಂಧ ಹೊಂದಿದ್ದರಿಂದ ಮತ್ತು ಅವರ ಕಠಿಣ ಪರಿಶ್ರಮಕ್ಕಾಗಿ ಅವರನ್ನು ಸನ್ಮಾನಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತ್ರಿಧ್ಯಾ ಟೆಕ್‌ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ನಿರ್ದೇಶಕ ರಮೇಶ್ ಮರಂದ್ ಅವರು ಮಾತನಾಡಿ, ನಮ್ಮ ಉದ್ಯೋಗಿಗಳನ್ನು ಗುರುತಿಸುವ ಕಾರ್ಯಕ್ರಮದ ಭಾಗವಾಗಿ ನಾವು ಉದ್ಯೋಗಿಗಳಿಗೆ ಕಾರುಗಳನ್ನು ಉಡುಗೊರೆಯಾಗಿ ನೀಡುತ್ತಿದ್ದೇವೆ. ನಾವು ಸೃಷ್ಟಿಸಿದ ಸಂಪತ್ತನ್ನು ನಮ್ಮ ಉದ್ಯೋಗಿಗಳೊಂದಿಗೆ ಹಂಚಿಕೊಳ್ಳಲು ಈ ಕ್ರಮಕೈಗೊಂಡಿದ್ದೇವೆ ಎಂದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular