HomeInternationalಒಟ್ಟಿಗೆ ಡಾನ್ಸ್ ಮಾಡಿದ ದಂಪತಿಗೆ 10 ವರ್ಷ ಜೈಲು; ಇದರ ಹಿಂದಿದೆ ಈ ಕಾರಣ

ಒಟ್ಟಿಗೆ ಡಾನ್ಸ್ ಮಾಡಿದ ದಂಪತಿಗೆ 10 ವರ್ಷ ಜೈಲು; ಇದರ ಹಿಂದಿದೆ ಈ ಕಾರಣ

ಬೀದಿಯಲ್ಲಿ ಒಟ್ಟಿಗೆ ನೃತ್ಯ ಮಾಡುವ ವೀಡಿಯೊವನ್ನು ಪೋಸ್ಟ್ ಮಾಡಿದ ನಂತರ ಇರಾನ್‌ನಲ್ಲಿ ಕಂಟೆಂಟ್ ಕ್ರಿಯೇಟರ್ ದಂಪತಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಭ್ರಷ್ಟಾಚಾರ, ವೇಶ್ಯಾವಾಟಿಕೆ ಮತ್ತು ಪ್ರಚಾರ ಆರೋಪದ ಮೇಲೆ ದಂಪತಿಗೆ ಶಿಕ್ಷೆ ವಿಧಿಸಲಾಗಿದೆ ಎಂದು ವರದಿಯಾಗಿದೆ.

ಟೆಹ್ರಾನ್‌ನ ಆಜಾದಿ (ಫ್ರೀಡಂ) ಟವರ್‌ನಲ್ಲಿ ಚಿತ್ರೀಕರಿಸಲಾದ ವೀಡಿಯೊವನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಗಳಲ್ಲಿ ಪೋಸ್ಟ್ ಮಾಡಿದ ನಂತರ ದಂಪತಿಗಳನ್ನು ಬಂಧಿಸಲಾಯಿತು ಎಂದು ಮೂಲವೊಂದು ಬಿಬಿಸಿ ಮಾನಿಟರಿಂಗ್‌ಗೆ ತಿಳಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

21 ವರ್ಷದ ಅಸ್ಟಿಯಾಜ್ ಹಕಿಕಿ ಮತ್ತು ಆಕೆಯ ಪತಿ 22 ವರ್ಷದ ಅಮೀರ್ ಮೊಹಮ್ಮದ್ ಅಹ್ಮದಿ ಅವರನ್ನ ಭ್ರಷ್ಟಾಚಾರ ಮತ್ತು ವೇಶ್ಯಾವಾಟಿಕೆಯನ್ನು ಉತ್ತೇಜಿಸುವುದು, ರಾಷ್ಟ್ರೀಯ ಭದ್ರತೆಗೆ ವಿರುದ್ಧ ವರ್ತನೆ ಆರೋಪ ಹೊರಿಸಲಾಗಿದೆ ಎಂದು ವರದಿಯಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular