ಮುಂಬೈ: ಜನರಿಗೆ ಹಲವಾರು ವಿಷಯಗಳ ಬಗ್ಗೆ ಅರಿವು ಮೂಡಿಸಲು ಮುಂಬೈ ಪೊಲೀಸರು ಪದೇ ಪದೇ ಹಲವಾರು ಮೀಮ್‌ಗಳು ಮತ್ತು ಇತರ ವಿಡಿಯೋ ಆಧಾರಿತ ಸಾರ್ವಜನಿಕ ಸೇವಾ ಪ್ರಕಟಣೆಗಳನ್ನು ಶೇರ್ ಮಾಡುತ್ತಿರುತ್ತಾರೆ. ಇದೀಗ ಸಹಾಯವಾಣಿ ಸಂಖ್ಯೆಗೆ ಕರೆ ಮಾಡುವ ಮೂಲಕ ತುರ್ತು ಪರಿಸ್ಥಿತಿಯನ್ನು ಹೇಗೆ ಎದುರಿಸಬೇಕು ಎಂಬ ಬಗ್ಗೆ ಟ್ವೀಟ್ ಮೂಲಕ ಹೇಳಿದ್ದಾರೆ.
ಏನಾದರೂ ಸಮಸ್ಯೆ ಇದ್ದರೆ ಯೋಚನೆ ಮಾಡಬೇಡಿ, ಕೇವಲ 100 ಸಂಖ್ಯೆಗೆ ಡಯಲ್ ಮಾಡಿ ಎಂದು ಹೇಳಿದ್ದಾರೆ. ಇದನ್ನು ಕೆಲವು ಬಳಕೆದಾರರು ತಮಾಷೆಯಾಗಿ ತೆಗೆದುಕೊಂಡು, ತಮಾಷೆಯ ಕಮೆಂಟ್ ಮಾಡುತ್ತಿದ್ದಾರೆ.
ಒಬ್ಬ ತರ್ಲೆ ಕಮೆಂಟಿಗ, @BMSKhan ಎಂಬ ಹೆಸರಿನ ಬಳಕೆದಾರ ಗಗನಯಾತ್ರಿಯಂತೆ ಧರಿಸಿರುವ ವ್ಯಕ್ತಿಯೊಬ್ಬರು ಚಂದ್ರನ ಮೇಲೆ ನಿಂತಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಹಿನ್ನೆಲೆಯಲ್ಲಿ, ನೀಲಿ ಗ್ರಹವೂ ಗೋಚರಿಸುತ್ತದೆ. ಈ ಚಿತ್ರವನ್ನು ಶೇರ್ ಮಾಡಿಕೊಂಡು “ನಾನು ಇಲ್ಲಿ ಸಿಲುಕಿಕೊಂಡಿದ್ದೇನೆ, ಕಾಪಾಡಿ” ಎಂದು ತಿಳಿಸಿದ್ದಾನೆ.
ಅದಕ್ಕೆ ಪೊಲೀಸರು ಕೂಡ ಅಷ್ಟೇ ತಮಾಷೆಯಾಗಿ ರಿಪ್ಲೈ ಮಾಡಿದ್ದು, “ಇದು ತಮ್ಮ ಅಧಿಕಾರ ವ್ಯಾಪ್ತಿಗೆ ಒಳಪಟ್ಟಿಲ್ಲ. ಆದರೆ ಚಂದ್ರನ ಮೇಲೆ ಹೋದಾಗಲೂ ನಮ್ಮನ್ನು ನೆನಪಿಸಿಕೊಂಡಿದ್ದಕ್ಕೆ ಧನ್ಯವಾದ” ಎಂದಿದ್ದಾರೆ. ಇದಕ್ಕೆ ಥರಹೇವಾರಿ ತಮಾಷೆಗೆ ಕಮೆಂಟ್ಸ್ ಬರುತ್ತಿವೆ.
https://twitter.com/MumbaiPolice/status/1619953467644338183?ref_src=twsrc%5Etfw%7Ctwcamp%5Etweetembed%7Ctwterm%5E1619956783505879044%7Ctwgr%5Ecd3a513e3afb6e7581b22a0a1c00a0098051121d%7Ctwcon%5Es2_&ref_url=https%3A%2F%2Fwww.ndtv.com%2Foffbeat%2Fmumbai-polices-response-to-man-stuck-on-moon-leaves-internet-chuckling-3738453