ಪ್ರಾಣಿಗಳು ರಸ್ತೆ ದಾಟುದಾಗ ಅಪಘಾತಗಳನ್ನು ನಿಗ್ರಹಿಸಲು, ಅನೇಕ ದೇಶಗಳು ವನ್ಯಜೀವಿ ದಾಟುವಿಕೆಗಳು, ಕಾರಿಡಾರ್‌ಗಳು, ಸೇತುವೆಗಳು, ಮೇಲ್ಸೇತುವೆಗಳು ಮತ್ತು ಸುರಂಗಗಳನ್ನು ನಿರ್ಮಿಸಿವೆ. ವನ್ಯಜೀವಿಗಳು ನಡೆಯುವ ದಾರಿಯ ಎರಡೂ ಬದಿಗಳಲ್ಲಿ ಆಯಕಟ್ಟಿನ ರೀತಿಯಲ್ಲಿ ಬೇಲಿ ರಚಿಸಲಾಗುತ್ತದೆ. ಆದಾಗ್ಯೂ, ಕಾಡಿನ ಇನ್ನೊಂದು ಬದಿಯನ್ನು ತಲುಪಲು ಪ್ರಾಣಿಗಳು ಇನ್ನೂ ಹೆದ್ದಾರಿಗಳು ಮತ್ತು ಬೈವೇಗಳನ್ನು ದಾಟಬೇಕಾದ ಅನೇಕ ಸ್ಥಳಗಳಿವೆ.
ಭಾರತೀಯ ಆಡಳಿತ ಸೇವೆಯ (ಐಎಎಸ್) ಅಧಿಕಾರಿ ಸುಪ್ರಿಯಾ ಸಾಹು ಅವರು ಹಂಚಿಕೊಂಡ ವೀಡಿಯೊದಲ್ಲಿ ‘ದುಃಖದ ವಾಸ್ತವ’ದ ಚಿತ್ರಣ ಕಾಣಬಹುದಾಗಿದೆ.
ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಕಿರು ವಿಡಿಯೋದಲ್ಲಿ ತಾಯಿ ಆನೆಯೊಂದು ತನ್ನ ಮಗುವಿಗೆ ರಸ್ತೆಯನ್ನು ಸುರಕ್ಷಿತವಾಗಿ ದಾಟುವುದು ಹೇಗೆಂದು ಕಲಿಸುತ್ತಿರುವಂತೆ ತೋರುತ್ತಿದೆ. ತಾಯಿ-ಮಗುವಿನ ಜೋಡಿಯು ನಿಧಾನವಾಗಿ ರಸ್ತೆಯನ್ನು ಸಮೀಪಿಸುವುದರೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ, ಮರಿ ಆನೆಯು ತಾಯಿಯ ಕಾಲುಗಳ ಸಮೀಪ ಬರುತ್ತದೆ. ಇಬ್ಬರೂ ಮುಂದೆ ಸಾಗುವ ಮೊದಲು ಆನೆ ತನ್ನ ಮಗುವಿಗೆ ಕೆಲವು ಸೂಚನೆಗಳನ್ನು ನೀಡುತ್ತಿರುವಂತೆ ವಿಡಿಯೋದಲ್ಲಿ ನೋಡಬಹುದು.
ವಿಡಿಯೋದ ಉದ್ದಕ್ಕೂ, ಮರಿ ಆನೆ ತನ್ನ ತಾಯಿಯ ಹತ್ತಿರ ಉಳಿಯುತ್ತದೆ. ಏತನ್ಮಧ್ಯೆ, ರಸ್ತೆ ದಾಟುವ ಪಾಠವನ್ನು ನೀಡುವಾಗ ಮಗುವನ್ನು ಸುರಕ್ಷಿತ ವಲಯದಲ್ಲಿ ಇರಿಸಲು ತಾಯಿ ಬದಿಗಳನ್ನು ಬದಲಾಯಿಸುವ ಕ್ಯೂಟ್ ವಿಡಿಯೋ ಇದಾಗಿದೆ. ಇದನ್ನು ನೋಡಿ ನೆಟ್ಟಿಗರು ಭಾವುಕರಾಗಿದ್ದಾರೆ. ಪ್ರಾಣಿಗಳಿಗೆ ಸುರಕ್ಷಿತವಾಗಿ ರಸ್ತೆ ದಾಟುವ ಅವಕಾಶವನ್ನು ಕಲ್ಪಿಸಬೇಕಿದೆ ಎಂದು ಹಲವರು ಕಮೆಂಟ್ ಮೂಲಕ ತಿಳಿಸಿದ್ದಾರೆ.