HomeInternationalಕೋಪದ ಭರದಲ್ಲಿ ʼಕಾಂಡೋಮ್ʼ ಸುತ್ತಿದ ಬಾಳೆಹಣ್ಣು ತಿಂದ ಭೂಪ; ಮುಂದೇನಾಯ್ತು ಗೊತ್ತಾ ?

ಕೋಪದ ಭರದಲ್ಲಿ ʼಕಾಂಡೋಮ್ʼ ಸುತ್ತಿದ ಬಾಳೆಹಣ್ಣು ತಿಂದ ಭೂಪ; ಮುಂದೇನಾಯ್ತು ಗೊತ್ತಾ ?

ನ್ಯೂಯಾರ್ಕ್​: ಕೋಪದಲ್ಲಿ ಮನುಷ್ಯರು ಏನು ಬೇಕಾದರೂ ಮಾಡುತ್ತಾರೆ. ಹಾಗೆಂದು ಇಲ್ಲೊಬ್ಬ ಮಾಡಿರುವುದು ಮಾತ್ರ ಭಯಾನಕವಾದದ್ದು. ಅದೇನೆಂದರೆ, ಕೋಪದ ಭರದಲ್ಲಿ ಕಾಂಡೋಮ್‌ನಲ್ಲಿ ಸುತ್ತಿದ್ದ ಬಾಳೆಹಣ್ಣು ತಿಂದಿದ್ದಾನೆ.

ಈ ಘಟನೆ ನಡೆದಿರುವುದು ಅಮೆರಿಕದಲ್ಲಿ. ಕಾಂಡೋಮ್‌ ಸುತ್ತಿದ ಬಾಳೆಹಣ್ಣು ತಿಂದ ವ್ಯಕ್ತಿ 24 ಗಂಟೆ ಮಲ ವಿಸರ್ಜನೆ ಮಾಡದೇ ಒದ್ದಾಡುತ್ತಿದ್ದ. ಬಳಿಕ ಆತನನ್ನು ಆಸ್ಪತ್ರೆಗೆ ದಾಖಲಿಸಿ ಸ್ಕ್ಯಾನ್​ ಮಾಡಿದಾಗ ಆತನ ಹೊಟ್ಟೆಯಲ್ಲಿ ಕಾಂಡೋಮ್ ಸುತ್ತಿದ್ದ ಬಾಳೆಹಣ್ಣನ್ನು ವೈದ್ಯರು ಕಂಡು ಶಾಕ್​ ಅಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾಂಡೋಮ್ ಸುತ್ತಿದ ಬಾಳೆಹಣ್ಣು ಅವನ ಸಣ್ಣ ಕರುಳಿಗೆ ಅಡ್ಡಿಯಾಗಿರುವುದದು ತಿಳಿದುಬಂದಿದೆ. ಬಳಿಕ ಶಸ್ತ್ರ ಚಿಕಿತ್ಸೆ ಮಾಡಿ ಬಾಳೆಹಣ್ಣನ್ನು ಹೊರತೆಗೆಯಲಾಗಿದೆ. ವೈದ್ಯಕೀಯ ವೃತ್ತಿ ಇತಿಹಾಸದಲ್ಲೇ ಇದೇ ಮೊದಲ ಬಾರಿ ಈ ರೀತಿಯ ಘಟನೆ ನಡೆದಿದೆ ಎಂದು ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರು ತಿಳಿಸಿದ್ದಾರೆ. ಖಿನ್ನತೆಯ ಕಾಯಿಲೆಯನ್ನು ಹೊಂದಿರುವ ರೋಗಿಯು ಹಾರ್ಮೋನ್‌ ಏರುಪೇರಾದ ಹಿನ್ನೆಲೆಯಲ್ಲಿ ಒಮ್ಮೊಮ್ಮೆ ಹೀಗೆಲ್ಲಾ ಮಾಡುತ್ತಾರೆ ಎಂದು ವೈದ್ಯರು ಹೇಳಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular